ಸಮಸಮಾಜ ನಿರ್ಮಾಣಕ್ಕೆ ಹಡಪದ ಅಣ್ಣಪ್ಪ ಕೊಡುಗೆ ಅನನ್ಯ Surrender

ಚನ್ನಗಿರಿ ತಾಲೂಕು ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಮಾಸಿಕ ಶಿವಾನುಭವ ಹಾಗೂ ನಿಜಶರಣ ಹಡಪದ ಅಪ್ಪಣ್ಣನವರ ಸ್ಮರಣೋತ್ಸವದಲ್ಲಿ ಶ್ರೀ ಡಾ. ಗುರುಬಸವ ಸ್ವಾಮೀಜಿ ಮಾತನಾಡಿದರು. ಶ್ರೀ ಬಸವಾನಂದ ಸ್ವಾಮೀಜಿ, ಚಿನ್ಮಯಾನಂದ, ಎಂ. ವೀರೇಶಪ್ಪ, ಸೌಭಾಗ್ಯ ಇದ್ದರು. Surrender
ಚನ್ನಗಿರಿ ತಾಲೂಕು ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಮಾಸಿಕ ಶಿವಾನುಭವ ಹಾಗೂ ನಿಜಶರಣ ಹಡಪದ ಅಪ್ಪಣ್ಣನವರ ಸ್ಮರಣೋತ್ಸವದಲ್ಲಿ ಶ್ರೀ ಡಾ. ಗುರುಬಸವ ಸ್ವಾಮೀಜಿ ಮಾತನಾಡಿದರು. ಶ್ರೀ ಬಸವಾನಂದ ಸ್ವಾಮೀಜಿ, ಚಿನ್ಮಯಾನಂದ, ಎಂ. ವೀರೇಶಪ್ಪ, ಸೌಭಾಗ್ಯ ಇದ್ದರು. Surrender
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಗುರುಬಸವ ಸ್ವಾಮೀಜಿ ಹೇಳಿಕೆ
  • ಪಾಂಡೋಮಟ್ಟಿ ವಿರಕ್ತ ಮಠದಲ್ಲಿ 885ನೇ ಶಿವಾನುಭವ ಕಾರ್ಯಕ್ರಮ
ಚನ್ನಗಿರಿ: ಅಸಮಾನತೆ, ಜಾತಿ ವ್ಯವಸ್ಥೆ ತೊಲಗಿಸಿ ಸಮಸಮಾಜ ನಿರ್ಮಿಸಲು ಶ್ರಮಿಸಿದ ಹಡಪದ ಅಪ್ಪಣ್ಣ, ಬಸವಣ್ಣನ ಆಪ್ತ ಒಡನಾಡಿಯಾಗಿದ್ದರು ಎಂದು ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಡಾ. ಗುರುಬಸವ ಸ್ವಾಮೀಜಿ ತಿಳಿಸಿದರು. Surrender
ತಾಲೂಕಿನ ಪಾಂಡೋಮಟ್ಟಿ ವಿರಕ್ತಮಠದಲ್ಲಿ ಭಾನುವಾರ 885ನೇ ಮಾಸಿಕ ಶಿವಾನುಭವ ಹಾಗೂ ನಿಜಶರಣ ಹಡಪದ ಅಪ್ಪಣ್ಣ ಸ್ಮರಣೋತ್ಸವದಲ್ಲಿ ಮಾತನಾಡಿದರು.
ಬಸವೇಶ್ವರರು ಶರಣ ಹಡಪದ ಅಪ್ಪಣ್ಣ ಅವರನ್ನು ನಿಜಸುಳಿ ಎಂದು ಕರೆಯುತ್ತಿದ್ದರು. ಅಂಗೈಯಲ್ಲಿ ಲಿಂಗ ಇಟ್ಟುಕೊಂಡು ಲಿಂಗವನ್ನು ನೋಡುತ್ತ ತಲ್ಲಿನರಾಗುತ್ತಿದ್ದರು. ಆ ಕಾಲದಲ್ಲಿ ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಮೋಳಿಗೆಯ ಮಾರಯ್ಯ, ಮೇದಾರ ಕೇತಯ್ಯ ಸಮಗಾರ ಹರಳಯ್ಯ, ಸೊನ್ನಲಗದ ಸಿದ್ದರಾಮ ಸೇರಿದಂತೆ ಎಲ್ಲ ಶರಣರಿಗೆ ಅನುಭವ ಮಂಟಪ ಅವಕಾಶ ಕಲ್ಪಿಸಿಕೊಟ್ಟಿತು ಎಂದರು.
ಸಮಾಜದಲ್ಲಿ ಹಡಪದರ ಮೇಲಿದ್ದ ತಪ್ಪು ಕಲ್ಪನೆ ದೂರಮಾಡಲು ಅಪ್ಪಣ್ಣನನ್ನು ಆಪ್ತ ಕಾರ್ಯದರ್ಶಿಯಾಗಿ ಮಾಡಿಕೊಂಡು ತಮ್ಮನ್ನು ಭೇಟಿ ಮಾಡಲು ಬರುವ ಪ್ರತಿಯೊಬ್ಬರು ಮೊದಲು ಅಪ್ಪಣ್ಣನನ್ನು ಭೇಟಿ ಮಾಡುವಂತೆ ಮಾಡಿದರು ಎಂದು ತಿಳಿಸಿದರು.
ಅಪ್ಪಣ್ಣನ ವಚನಗಳನ್ನು ಅಧ್ಯಯನ ಮಾಡಿ ಅವುಗಳನ್ನು ಅರ್ಥೈಸಿಕೊಂಡು ಮಕ್ಕಳಿಗೂ ಹೇಳಿಕೊಡಬೇಕು. ಆಗ ಮಾತ್ರ ಅವರನ್ನು ಅರಿಯಲು ಸಾಧ್ಯ ಎಂದರು.
ಧಾರವಾಡ ಮುಮ್ಮಿಗಟ್ಟಿ ಬಸವ ಯೋಗಾಶ್ರಮದ ಶ್ರೀ ಬಸವಾನಂದ ಸ್ವಾಮೀಜಿ ಮಾತನಾಡಿ, ಬಸವೇಶ್ವರರ ಕಾಲಘಟ್ಟದಲ್ಲಿ ಎಲ್ಲ ಶರಣರಿಗೆ ಸಮಾನ ಅವಕಾಶ ಕಲ್ಪಿಸಿಕೊಡಲಾಗಿತ್ತು. ಅದರಲ್ಲಿ ಹಡಪದ ಅಪ್ಪಣ್ಣ ಕೂಡ ಒಬ್ಬರಾಗಿ ಕಾಯಕ ನಿಷ್ಠ, ವಚನಕಾರ ಹಾಗೂ ಬಸವಣ್ಣನ ಆಪ್ತ ಸಹಾಯಕನಾಗಿದ್ದರು. ಮನುಷ್ಯ ಮನಸ್ಸಿನ ನಿಯಂತ್ರಣವನ್ನು ಮಾಡಿ ಅಂತರಂಗದ ನೋಟವನ್ನು ಹೊಂದಬೇಕಾಗಿದೆ. ನೈತಿಕ, ಆಧ್ಯಾತ್ಮಿಕ, ಧಾರ್ಮಿಕ ವಿಚಾರಗಳನ್ನು ಅರಿಯಲು ಶಿವಾನುಭವ ಸಹಕಾರಿಯಾಗಲಿದೆ ಎಂದರು.
ಬೇಲೂರು ಭಾರತಿ ಜ್ಞಾನಸಮಿತಿ ಸದಸ್ಯೆ ಸೌಭಾಗ್ಯ, ಚನ್ನಗಿರಿ ತಾಲೂಕು ನಿವಾಸಿಗಳ ಸಂಘದ ಅಧ್ಯಕ್ಷ ಚಿನ್ಮಯಾನಂದ, ಗಂಗಾವತಿ ಉದ್ದಿಮೆದಾರ ಎಂ. ವೀರೇಶಪ್ಪ, ಹಿರೇಸಾದರಹಳ್ಳಿ ಬಸವರಾಜಪ್ಪ, ಕಾಕನೂರು ಕೆ.ಜೆ. ರೇಣುಕಾ, ಬಿಸಲೆಹಳ್ಳಿ ಗೌರಮ್ಮ, ಮಲಹಾಳ್ ಮಹಾದೇವಪ್ಪ, ಧನಂಜಯ್, ಸುನೀತರಾಜು, ಚಂದ್ರಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net