ಜೇನು ಸಂತತಿಯನ್ನು ರಕ್ಷಿಸಲು ರೈತರು ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಬೇಕು ಮತ್ತು ಪರಿಸರ ಸ್ನೇಹಿ ಪೀಡೆ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ತರಬೇತಿಯಲ್ಲಿ ಜೇನು ಸಾಕಾಣಿಕೆ ವಿಧಾನ, ನಿರ್ವಹಣೆ, ಜೇನುತುಪ್ಪ ಸಂಗ್ರಹಣೆ, ಮಾರಾಟ ಮತ್ತು ಪರಾಗಸ್ಪರ್ಶದಿಂದ ಬೆಳೆಗಳಿಗಾಗುವ ಲಾಭಗಳ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ. ಕರ್ನಾಟಕ ತೋಟಗಾರಿಕೆ ಇಲಾಖೆ ಸೇರಿ ವಿವಿಧ ಸಂಸ್ಥೆಗಳು ಇಂತಹ ತರಬೇತಿಗಳ ಮೂಲಕ ಜೇನುಕೃಷಿಯನ್ನು ಪೂರಕ ಆದಾಯದ ಉಪ ಉದ್ಯೋಗವಾಗಿ ಬೆಳೆಸಲು ಪ್ರೋತ್ಸಾಹಿಸುತ್ತಿವೆ ಎಂದು ಮಾಹಿತಿ ನೀಡಿದರು. ಕೃಷಿ ಮತ್ತು ತೋಟಗಾರಿಕೆಯ ಡಾ. ಸಣ್ಣತಿಮ್ಮಪ್ಪ, ಡಾ. ಮಂಜುನಾಥ್, ಡಾ. ಗಂಗಪ್ಪಗೌಡ ಬಿರಾದರ್, ಡಾ. ಪ್ರಕಾಶ್, ಡಾ. ಶರಣಪ್ಪ, ಡಾ. ನಿರಂಜನ್ ಹಾಗೂ ರೈತರಾದ ವಸಂತಮ್ಮ, ರುದ್ರೇಶ್, ಶಶಿಕುಮಾರ್, ಚೇತನ್‌ಕುಮಾರ್ ಇತರರಿದ್ದರು.