ಹೊನ್ನಾಳಿ, ದಾಗಿನಕಟ್ಟೆ, ಬಸವಾಪಟ್ಟಣ, ಕುಂದೂರು, ಕಾರಿಗನೂರು ಕ್ರಾಸ್, ಹದಡಿ, ದಾವಣಗೆರೆ ಮಾರ್ಗದಲ್ಲಿ ಈಗಾಗಲೇ 2 ಸರ್ಕಾರಿ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ ನಗರ ಪ್ರದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ, ನೌಕರರಿಗೆ ಸರಿಯಾದ ಸಮಯಕ್ಕೆ ಸಿಗುತ್ತಿರಲಿಲ್ಲ. ಇದರಿಂದಾಗಿ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮಾರುತಿ ಕೆ.ಎನ್. ಅವರು ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಮನವಿ ಪರಿಗಣಿಸಿದ ಕೆಎಸ್‌ಆರ್‌ಟಿಸಿ ಹೊನ್ನಾಳಿ ಡಿಪೋದಿಂದ ಹೆಚ್ಚುವರಿ ಬಸ್ ಸೇವೆಯನ್ನು ಮಂಜೂರು ಮಾಡಿದ್ದು, ಸೋಮವಾರದಿಂದ ಕಾರ್ಯಾರಂಭಿಸಿದೆ. ಮಾರುತಿ ಕೆ.ಎನ್, ಮಾಜಿ ಗ್ರಾಪಂ ಅಧ್ಯಕ್ಷ ತಿಪ್ಪೇಶ್ ಎಂ.ಎಚ್, ರವಿಕುಮಾರ್, ಮಹಾಬಲೇಶ್, ಚಂದ್ರಶೇಖರ್, ರಾಜಪ್ಪ, ಸಂತೋಷ್ ಇತರರಿದ್ದರು.