ದುಶ್ಚಟ ಆರೋಗ್ಯಕ್ಕೆ ಕಂಟಕ Health camp

ಚನ್ನಗಿರಿ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರವನ್ನು ಹಾಲಸ್ವಾಮಿ ವಿರಕ್ತಮಠದ ಡಾ.ಬಸವ ಜಯಚಂದ್ರ ಸ್ವಾಮೀಜಿ ಉದ್ಘಾಟಿಸಿದರು. ಮೌಲಾನ ಮಹ್ಮದ್ ಸಾಲೀಮ್ ಸಾಬ್, ಅಮಾನುಲ್ಲಾ ಸಾಬ್, ಸೈಯದ್ ಖಲೀಂ ಬುಳಸಾಗರ ಇತರರಿದ್ದರು.Health camp
ಚನ್ನಗಿರಿ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರವನ್ನು ಹಾಲಸ್ವಾಮಿ ವಿರಕ್ತಮಠದ ಡಾ.ಬಸವ ಜಯಚಂದ್ರ ಸ್ವಾಮೀಜಿ ಉದ್ಘಾಟಿಸಿದರು. ಮೌಲಾನ ಮಹ್ಮದ್ ಸಾಲೀಮ್ ಸಾಬ್, ಅಮಾನುಲ್ಲಾ ಸಾಬ್, ಸೈಯದ್ ಖಲೀಂ ಬುಳಸಾಗರ ಇತರರಿದ್ದರು.Health camp
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಬಸವ ಜಯಚಂದ್ರ ಸ್ವಾಮೀಜಿ ಸಲಹೆ
  • ಉಚಿತ ಆರೋಗ್ಯ ಶಿಬಿರ
ಚನ್ನಗಿರಿ: ಪ್ಯಾಶನ್‌ಗಾಗಿ ದುಶ್ಚಟಗಳನ್ನು ರೂಢಿಸಿ ಕೊಂಡರೆ ಅದು ಜೀವನ ನಾಶ ಮಾಡುವ ಜತೆಗೆ ಕುಟುಂಬವನ್ನು ಬಲಿ ತೆಗೆದುಕೊಳ್ಳುತ್ತದೆ ಎಂದು ಹಾಲಸ್ವಾಮಿ ವಿರಕ್ತಮಠದ ಡಾ.ಬಸವ ಜಯಚಂದ್ರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಟಿಪ್ಪು ಸರ್ಕಲ್ ಕೌಸರ್ ಮಸೀದಿ ಬಳಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅಂಜುಮನ್ ಎ ಮುಸ್ಲಿಮೀನ್ ಕಮಿಟಿ ಹಾಗೂ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪಾಲಕರು, ದುಡಿದ ಹಣವನ್ನು ಮಕ್ಕಳ ಶ್ರೇಯಸ್ಸಿಗೆ ಬಳಸುತ್ತಾರೆ. ನಾವು ಎಲ್ಲರಂತೆ ಸುಂದರ ಬದುಕು ಕಟ್ಟಿ ಕೊಳ್ಳಬೇಕು ಎನ್ನುವ ಆಸೆ ಹೊಂದಿರುತ್ತಾರೆ. ಆದ್ದರಿಂದ ಮಕ್ಕಳು ಪಾಲಕರ ಆಸೆ ಪೂರೈಸುವ ಕೆಲಸ ಮಾಡಬೇಕೇ ಹೊರತು ಮೋಜು- ಮಸ್ತಿ, ದುಶ್ಚಟಗಳಿಗೆ ದಾಸರಾಗಬಾರದು ಎಂದರು.
ಸಾಧನೆಯ ಹಾದಿ ಸುಲಭವಲ್ಲ. ಕಲಿಯುವುದು ಬಹಳಷ್ಟಿದೆ, ಎಲ್ಲವನ್ನೂ ಕಲಿತಿದ್ದೇವೆ ಎಂದು ಮೈಮರೆತು ಬೀಗುವ ಬದಲು ಕಲಿಯುವತ್ತ ಗಮನಹರಿಸಿ ಯಶಸ್ಸು ಸಾಧಿಸಿದರೆ ಎಲ್ಲರೂ ಪ್ರೀತಿ- ಗೌರವದಿಂದ ಕಾಣುತ್ತಾರೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮನೆ ಮತ್ತು ನಂಬಿದವರಿಗೆ ಆದರ್ಶವಾಗಿದ್ದರೆ ಬದುಕು ಸಾರ್ಥಕ್ಯ ಪಡೆಯುತ್ತದೆ ಎಂದು ಹೇಳಿದರು.
ಕೌಸರ್ ಮಸೀದಿ ಪ್ರಧಾನ ಧರ್ಮಗುರು ಮೌಲಾನ ಮಹ್ಮದ್ ಸಾಲೀಮ್ ಸಾಬ್ ಮಾತನಾಡಿ, ಇತ್ತೀಚೆಗೆ ಮನುಷ್ಯ ಹಣ ಮತ್ತು ಸಂಪತ್ತು ಗಳಿಸುವ ಪ್ರಯತ್ನದಲ್ಲಿ ಆರೋಗ್ಯ ಹಾಳುಮಾಡಿಕೊಂಡು ದಿನನಿತ್ಯ ಆಸ್ಪತ್ರೆ, ಮಾತ್ರೆಗಳಿಗೆ ಹಣ ಖರ್ಚು ಮಾಡುತ್ತಿದ್ದಾನೆ ಎಂದರು.
ಒತ್ತಡದ ಬದುಕು ಆರೋಗ್ಯ ಹದಹೆಡಿಸುತ್ತದೆ. ನೆಮ್ಮದಿಯ ಬದುಕಿಗೆ ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ಸಾಂಪ್ರದಾಯಿಕ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು ಮತ್ತು ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಅಂಜುಮನ್ ಎ ಮುಸ್ಲಿಮೀನ್ ಕಮಿಟಿ ಗೌರವಾಧ್ಯಕ್ಷ ಅಮಾನುಲ್ಲಾ ಸಾಬ್, ಸೈಯದ್ ಖಲೀಂ ಬುಳಸಾಗರ, ಅಬ್ದುಲ್ ಖುದ್ದೂಸ್ ಸಾಬ್, ಪುರಸಭೆ ಮಾಜಿ ಸದಸ್ಯ ಸೈಯದ್ ಗೌಸ್‌ಪೀರ್, ತಾಪಂ ಮಾಜಿ ಸದಸ್ಯರಾದ ಉಸ್ಮಾನ್ ಷರೀಫ್, ಮಹ್ಮದ್ ಶಬ್ಬಾಸ್, ಸೈಯದ್ ತನ್ವೀರ್, ಕಲಿಗಾರ ಷಫೀವುಲ್ಲಾ, ಉಮ್ಮರ್ ಮುಕಿಯಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net