ಮೊದಲು ನಗರದ ಪ್ರತಿಷ್ಠಿತ ಆಸ್ಪತ್ರೆಗೆ ಹೋಗಿ ತೋರಿಸಿದಾಗ ಅಲ್ಲಿನ ವೈದ್ಯ ಡಾ.ನಿತಿನ್ ಸಲಹೆಯಂತೆ ಇಂದು ಅಜ್ಜಿ ಜತೆ ಅಳಿಯ ಸುಜನ್, ನವೋದಯ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆಂದು ಬಂದಿದ್ದ. ಆಪರೇಷನ್ ಥಿಯೇಟರ್‌ನಲ್ಲೇ ಮೃತಪಟ್ಟಿದ್ದಾನೆ. ಅನಸ್ತೇಶಿಯಾ ಅಥವಾ ಓವರ್ ಡೋಸ್ ನೀಡಿದ ಕಾರಣಕ್ಕೆ ಅವನು ಮೃತಪಟ್ಟಿದ್ದು, ಸೂಕ್ತ ತನಿಖೆ ಆಗಬೇಕು ಎಂದು ಸುಜನ್‌ನ ಅತ್ತೆ ರಾಧಾ ಆಗ್ರಹಿಸಿದರು.