ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಸ್ತುತ ಸ್ಥಿತಿ ದೃಢೀಕರಿಸಿ, ಅವರನ್ನು ಶಿಕ್ಷಣದ ವ್ಯಾಪ್ತಿಗೆ ತರುವ ಉದ್ದೇಶದಡಿ ವಿಶೇಷ ಮನೆ ಭೇಟಿ ಹಾಗೂ ಸಮೀಕ್ಷಾ ಅಭಿಯಾನ ನಡೆಯುತ್ತಿದೆ. ಬಿಇಒ ಮಾರ್ಗದರ್ಶನದಲ್ಲಿ ಬಿಆರ್‌ಸಿ, ಸಿಆರ್‌ಪಿ, ಮುಖ್ಯ ಶಿಕ್ಷಕರು, ಶಿಕ್ಷಕರು, ಇಸಿಒ, ಹಾಜರಾತಿ ಪ್ರಾಧಿಕಾರಿಗಳು, ಎಸ್‌ಡಿಎಂಸಿ ಸದಸ್ಯರು ಗುರುತಿಸಲ್ಪಟ್ಟ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಸಮಾಲೋಚನೆ ನಡೆಸುವರು.