ನಂತರ ಸಾಮೂಹಿಕ ಭೋಜನ ಸವಿದು ನಂತರ ಪುಣ್ಯಕ್ಷೇತ್ರ ತೀರ್ಥಗಿರಿಯ ತೀರ್ಥರಾಮೇಶ್ವರದಲ್ಲಿ ದೇವಾಲಯಕ್ಕೆ ಬಂದು ರಾತ್ರಿ ವಿಶ್ರಾಂತಿ ಪಡೆಯುತ್ತಾರೆ. ಗ್ರಾಮ ದೇವರುಗಳಾದ ಬೀರಪ್ಪ, ಕಬಿಗಿರಿ ರಂಗನಾಥ ಸ್ವಾಮಿ, ಬೆಳಗುತ್ತಿ ತೀರ್ಥಪ್ಪ, ವೀರಭದ್ರೇಶ್ವರ ಸ್ವಾಮಿಯನ್ನು ಮಂಗಳವಾದ್ಯಗಳೊಂದಿಗೆ ತೀರ್ಥರಾಮೇಶ್ವರ ದೇವಾಲಯಕ್ಕೆ ಕೊಂಡೊಯ್ದು, ಉಳಿದಿದ್ದ ಗ್ರಾಮಸ್ಥರನ್ನು ಗ್ರಾಮಕ್ಕೆ ಕರೆತರಲಾಗುವುದು.