ವರುಣನ ಕೃಪೆಗಾಗಿ ದೇಗುಲ ಬಳಿ ಸಂತೆ

ಉತ್ತಮ ಮಳೆಗಾಗಿ ಪ್ರಾರ್ಥಿಸಿ ಜಗಳೂರು ದೊಡ್ಡ ಮಾರಿಕಾಂಬಾ ದೇಗುಲದ ಬಳಿ ವಾರದ ಸಂತೆ ಮಾಡಲಾಯಿತು. worship
ಉತ್ತಮ ಮಳೆಗಾಗಿ ಪ್ರಾರ್ಥಿಸಿ ಜಗಳೂರು ದೊಡ್ಡ ಮಾರಿಕಾಂಬಾ ದೇಗುಲದ ಬಳಿ ವಾರದ ಸಂತೆ ಮಾಡಲಾಯಿತು. worship
Published on

ಪ್ರಮುಖ ಮುಖ್ಯಾಂಶಗಳು

  • ಜಗಳೂರಲ್ಲಿ ವಿಶೇಷ ವಾರದ ಸಂತೆ
ಜಗಳೂರು: ಮಳೆಗಾಗಿ ದೇವರ ಮೊರೆ ಹೋಗುವುದು, ಹೋಮ ಹವನ, ಕಪ್ಪೆಗಳ ಮದುವೆ ಸಹಜ. ಅದರಂತೆಯೇ ಜಗಳೂರು ಪಟ್ಟಣದಲ್ಲಿ ವಿಶಿಷ್ಟವಾಗಿ ದೇವರ ಸಂತೆ ಮಾಡುವ ಮೂಲಕ ಉತ್ತಮ ಮಳೆಗಾಗಿ ಪ್ರಾರ್ಥಿಸಲಾಯಿತು. worship
ಜಗಳೂರಿನಲ್ಲಿ ಶನಿವಾರ ದೊಡ್ಡ ಮಾಡಿಕಾಂಬಾ ದೇಸ್ಥಾನದ ಮುಂಭಾಗ ಪೂಜೆ ಸಲ್ಲಿಸಿ ಸಂತೆಗೆ ಚಾಲನೆ ಮಾಡಲಾಯಿತು.
ಮೂರು ವಾರ ದೇವಸ್ಥಾನದ ಮುಂಭಾಗ ಸಂತೆ ಮಾಡಿದರೆ ಮಳೆ ಬರುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಆದ್ದರಿಂದ ಕಳೆದ ಹಲವು ವರ್ಷಗಳಿಂದ ಉತ್ತಮ ಮಳೆಯಾಗದೇ ರೈತರು ಕಷ್ಟದಲ್ಲಿದ್ದು, ಈ ಬಾರಿ ಮಳೆಯಾದರೆ ಫಸಲು ಕೈ ಸೇರುತ್ತದೆ. ಹೀಗಾಗಿ ಮಳೆ ಕರುಣಿಸು ತಾಯಿ ಎಂದು ದೇವಿಯ ದೇವಸ್ಥಾನದ ಮುಂಭಾಗದಲ್ಲಿ ಸಂತೆ ಮಾಡುವ ಮೂಲಕ ಬೇಡಿಕೊಳ್ಳುತ್ತಿದ್ದಾರೆ.
ಈ ಹಿಂದೆ ಪ್ರತಿ ಶನಿವಾರ ಸಂತೆ ಮೈದಾನದಲ್ಲಿ ಸಂತೆ ನಡೆಸಲಾಗುತ್ತಿತ್ತು. ಈ ವಾರದಿಂದ ಮೂರು ವಾರಗಳ ಕಾಲ ದೊಡ್ಡ ಮಾರಿಕಾಂಬಾ ದೇವಸ್ಥಾನದ ಮುಂಭಾಗದಲ್ಲಿ ಸಂತೆ ಮಾಡಲಾಗುತ್ತದೆ. ದೇವಸ್ಥಾನದ ಮುಂಭಾಗ ಸಂತೆ ನಡೆಸಿದರೆ ಮಳೆಯಾಗುತ್ತದೆ ಎಂಬುದು ಈ ಭಾಗದ ಜನರ ನಂಬಿಕೆ. ಹೀಗಾಗಿ ಜನ ಸಂತೆಯನ್ನೂ ಮಾಡಿ ಬಿಡೋಣ ಮಳೆ ಬರಬಹುದು ಎಂದು ನಿರ್ಧರಿಸಿದ್ದಾರೆ.
ವಾರದ ಸಂತೆ ಸ್ಥಳ ಬದಲಾವಣೆಯಿಂದಾಗಿ ವ್ಯಾಪಾರಕ್ಕೆ ತೊಡಕಾಗಿದೆ. ಆದರೆ, ದೇವರ ಕಾರ್ಯ, ಮಳೆ ಬಂದು ಸಮೃದ್ಧಿ ನೆಲಸಲಿ ಎಂದು ದೇವಸ್ಥಾನ ಕಮಿಟಿಯಿಂದ ಮಾಡುತ್ತಿರುವ ಕೆಲಸಕ್ಕೆ ನಮ್ಮದೊಂದು ಸೇವೆ ಎನ್ನುತ್ತಾರೆ ವ್ಯಾಪಾರಿಯೊಬ್ಬರು.
ಹಲವು ನಿದರ್ಶಗಳುಂಟು: ದೇವಸ್ಥಾನದ ಬಳಿ ವಾರದ ಸಂತೆ ನಡೆಸುವ ಬಗ್ಗೆ ಜಗಳೂರು ಪಪಂ ಪ್ರಕಟಣೆ ಹೊರಡಿಸಿತ್ತು. ಇದನ್ನು ನೋಡಿದ ಸಾರ್ವಜನಿಕರು ದೇವಿ ಸಂತೆ ಎಂದೆ ಅಲ್ಲಿಗೆ ಬಂದು ವ್ಯಾಪಾರ ಮಾಡುತ್ತಾರೆ. ಇಷ್ಟು ವರ್ಷಗಳಲ್ಲಿ ಈ ವಾರದ ಸಂತೆ ಮುಕ್ತಾಯವಾಗುವುದರಲ್ಲಿ ಸಮೃದ್ಧ ಮಳೆ ಬಂದಿರುವುದಕ್ಕೆ ಹಲವು ನಿದರ್ಶನಗಳಿವೆ. ಆದ್ದರಿಂದ ಮಳೆಗಾಗಿ ವಾರದ ಸಂತೆ ಸಂಪ್ರದಾಯವಾಗಿ ಈ ಭಾಗದಲ್ಲಿ ಮುಂದುವರಿದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net