ಕ್ಯಾಂಪಸ್‌ನಲ್ಲಿ ಕಲೆ, ಸಂಸ್ಕೃತಿ ಸಂಗಮ

ದಾವಣಗೆರೆಯ ಯು.ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ‘ಎತ್ನಿಕ್ ಡೇ’ ಅಂಗವಾಗಿ ವಿದ್ಯರ್ಥಿಗಳು ತಿರುಪತಿ ವೆಂಕಟೇಶ್ವರ ಇನ್ನಿತರ ದೇವತೆಗಳ ವೇಷದಲ್ಲಿ ಮಿಂಚಿದರು.
ದಾವಣಗೆರೆಯ ಯು.ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ‘ಎತ್ನಿಕ್ ಡೇ’ ಅಂಗವಾಗಿ ವಿದ್ಯರ್ಥಿಗಳು ತಿರುಪತಿ ವೆಂಕಟೇಶ್ವರ ಇನ್ನಿತರ ದೇವತೆಗಳ ವೇಷದಲ್ಲಿ ಮಿಂಚಿದರು.
Published on

ಪ್ರಮುಖ ಮುಖ್ಯಾಂಶಗಳು

  • ಯು.ಬಿ.ಡಿ.ಟಿ ಕಾಲೇಜಿನಲ್ಲಿ ‘ಚೈತ್ರ’ ಕಾರ್ಯಕ್ರಮ
  • ‘ಎತ್ನಿಕ್ ಡೇ’ ಸಂಭ್ರಮ
ದಾವಣಗೆರೆ : ಯು.ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜು ಆವರಣ ಶನಿವಾರ ಕಲೆ ಮತ್ತು ಸಂಸ್ಕೃತಿಯ ಸಂಗಮವಾಗಿತ್ತು. ಸದಾ ಓದಿನ ಒತ್ತಡದಲ್ಲಿರುವ ವಿದ್ಯಾರ್ಥಿಗಳು ಅಲ್ಲಿ ಖುಷಿಯಾಗಿ ಕಾಲ ಕಳೆದರು. ಸಾಂಪ್ರದಾಯಿಕ ವೇಷಭೂಷಣ ತೊಟ್ಟು ಸಂಭ್ರಮಿಸಿದರು.
‘ಚೈತ್ರ-2026’ ಹಾಗೂ ‘ಎತ್ನಿಕ್ ಡೇ’ ಅಂಗವಾಗಿ ಕ್ಯಾಂಪಸ್‌ನಲ್ಲಿ ಉತ್ಸಾಹದ ವಾತಾವರಣ ತುಂಬಿತ್ತು. ತಿರುಪತಿ ವೆಂಕಟೇಶ್ವರ, ಉಗ್ರ ನರಸಿಂಹ ಹಾಗೂ ಶಿವ-ಪಾರ್ವತಿ ಪಾತ್ರಧಾರಿಗಳು ಭಕ್ತಿಯ ಸ್ಪರ್ಶ ನೀಡಿದರು.
ಮಹಾಭಾರತದ ಪಾತ್ರಧಾರಿಗಳಾದ ಧರ್ಮರಾಯ, ಅರ್ಜುನ, ಭೀಮ, ನಕುಲ, ಸಹದೇವ, ಶಕುನಿಯ ಪಾತ್ರಗಳು, ಯಕ್ಷಗಾನದ ವೇಷಧಾರಿಗಳು ಎಲ್ಲರ ಕಣ್ಮನ ಸೆಳೆದರು.
ಉಪನ್ಯಾಸಕರು ಕೂಡ ಈ ಸಂಭ್ರಮದಲ್ಲಿ ಹಿಂದೆ ಬೀಳಲಿಲ್ಲ. ಬಿಳಿ ಅಂಗಿ ಹಾಗೂ ಬಿಳಿ ಪಂಚೆ ಧರಿಸಿ, ಕೇಸರಿ ಪೇಟಾ ತೊಟ್ಟು ರಾಜ ಗಾಂಭೀರ್ಯದಿಂದ ಮಿಂಚಿದರು.
ಗುಜರಾತಿ ಶೈಲಿ, ಕೊಡಗಿನ ಉಡುಗೆ, ಉತ್ತರ ಕರ್ನಾಟಕದ ಪೇಟಾ ಹಾಗೂ ಲಂಬಾಣಿ ನೃತ್ಯಗಳು ಸಂಸ್ಕೃತಿಯ ವೈವಿಧ್ಯತೆಯನ್ನು ಸಾರಿದವು. ಸೀರೆ ಹಾಗೂ ಸಾಂಪ್ರದಾಯಿಕ ಉಡುಗೆಯಲ್ಲಿದ್ದ ವಿದ್ಯಾರ್ಥಿನಿಯರು ಗೆಳೆಯರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಸ್ಯಾಂಡಲ್‌ವುಡ್ ನಟಿ ಮಲೈಕಾ ಟಿ ವಸುಪಾಲ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಳೆ ತುಂಬಿದರು. ಮೆರವಣಿಗೆ ಮೂಲಕ ಅವರನ್ನು ವೇದಿಕೆಗೆ ಕರೆತರಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ನಟಿ ಮಲೈಕಾ ಟಿ ವಸುಪಾಲ್, ಪ್ರಾಚಾರ್ಯ ಡಾ. ಡಿ.ಪಿ. ನಾಗರಾಜಪ್ಪ, ಬಿಐಇಟಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರಿಯಾಂಕ, ಗಾಯಕ ಭರತ್ ನಾಯಕ್, ಇನ್ನರ್‌ವ್ಹೀಲ್ ಕ್ಲಬ್ ಸದಸ್ಯೆ ಭಾರತಿ ಕೇಶವ್, ಪತ್ರಕರ್ತ ಗುರುರಾಜ್ ಶಿರಹಟ್ಟಿ ಭಾಗವಹಿಸಿದ್ದರು. ಡಾ. ಎಸ್.ಬಿ. ಮಲ್ಲೂರು, ಡಾ. ಎಸ್. ಮಂಜಪ್ಪ, ಡಾ. ಎಸ್. ಮಂಜನಾಯ್ಕ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net