ಶೇ.90 ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಪಾವತಿ Guarantee

ಹೊನ್ನಾಳಿ ತಾಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಚ್.ಎಚ್. ಗದ್ದಿಗೇಶ ಮಾತನಾಡಿದರು. ತಾಪಂ ಇಒ ಧರಣೇಶ್ ಇದ್ದರು. Guarantee
ಹೊನ್ನಾಳಿ ತಾಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಚ್.ಎಚ್. ಗದ್ದಿಗೇಶ ಮಾತನಾಡಿದರು. ತಾಪಂ ಇಒ ಧರಣೇಶ್ ಇದ್ದರು. Guarantee
Published on

ಪ್ರಮುಖ ಮುಖ್ಯಾಂಶಗಳು

  • ಸಿಡಿಪಿಒ ಜ್ಯೋತಿ ಮಾಹಿತಿ
  • ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಹೊನ್ನಾಳಿ: ಗೃಹಲಕ್ಷ್ಮೀ ಯೋಜನೆಯಡಿ 36,728 ಮಹಿಳೆ ಯರು ಹೆಸರು ನೊಂದಾಯಿಸಿದ್ದು, ಶೇ. 90ರಷ್ಟು ಜನರಿಗೆ ಏಪ್ರಿಲ್ 26ಕ್ಕೆ 201.81 ಕೋಟಿ ರೂ. ಪಾವತಿಯಾಗಿದೆ. ವಿವಿಧ ಕಾರಣಗಳಿಂದ ಶೇ. 10ರಷ್ಟು ಫಲಾನುಭವಿಗಳಿಗೆ ಹಣ ತಲುಪಿಲ್ಲ ಎಂದು ಸಿಡಿಪಿಒ ಜ್ಯೋತಿ ಹೇಳಿದರು. Guarantee
ತಾಲೂಕು ಪಂಚಾಯಿತಿಯಲ್ಲಿ ಗುರುವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಂಕಿಅಂಶ ನೀಡಿ ಮಾತನಾಡಿದರು.
ಕಳೆದ 3 ವರ್ಷಗಳಲ್ಲಿ ಹೊನ್ನಾಳಿ ತಾಲೂಕಿನಲ್ಲಿ 450 ಜನ ಮರಣ ಹೊಂದಿದ್ದು, ಅವರ ಖಾತೆಗೆ ಜಮೆಯಾಗಿದ್ದ 4,28,000 ರೂ. ಹಣವನ್ನು ಸರ್ಕಾರಕ್ಕೆ ಮರಳಿಸಲಾಗಿದೆ ಎಂದರು.
ಇತ್ತೀಚೆಗೆ ಸಿಡಿಪಿಒ ಮೃತರ ಮಾಹಿತಿ ಕಲೆ ಹಾಕುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಮಾಹಿತಿ ಸಿಗದೇ ಮೃತರ ಖಾತೆಗೆ ಹಣ ಹೋಗುತ್ತಿದೆ ಎಂದು ಗ್ಯಾರಂಟಿ ಸಮಿತಿ ಸದಸ್ಯರಾದ ಆಶಾ ದೊಡ್ಡೆರೆಹಳ್ಳಿ ಹೇಳಿದರು. ಆಯಾ ಗ್ರಾಮಗಳ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿಯೊಂದು ಮಾಹಿತಿ ಇರುತ್ತದೆ. ಆ ಮೂಲಕ ಜನನ ಹಾಗೂ ಮರಣ ಹೊಂದಿದವರ ಮಾಹಿತಿ ತರಿಸಿಕೊಳ್ಳಬಹುದು. ಆದರೆ ಇವರು ಈ ಗೋಜಿಗೆ ಹೋಗಿಲ್ಲ ಎಂದು ದೂರಿದರು. ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಹೊನ್ನಾಳಿಯಲ್ಲಿ 1041 ಪದವೀಧರರು ಹೆಸರು ನೋಂದಾಯಿಸಿದ್ದು, 3.11 ಕೋಟಿ ರೂ. ಪಾವತಿಸಲಾಗಿದೆ, ಡಿಪ್ಲೊಮಾ ಫಲಾನುಭವಿಗಳು 20 ಜನರಿದ್ದು 67,000 ಪಾವತಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಪ್ರೀತಿಶ್ರೀ ಹೇಳಿದರು.
ಕಳೆದ 7 ತಿಂಗಳಿಂದ ಯುವನಿಧಿ ಹಣ ಬಿಡುಗಡೆಯಾಗಿಲ್ಲ ಎಂದು ಪದವೀಧರೆಯೊಬ್ಬರು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಅವರು ತಾಂತ್ರಿಕ ಸಮಸ್ಯೆಯಿಂದ ಹೀಗಾಗಿರಬಹುದು. ಶೀಘ್ರ ಈ ಬಗ್ಗೆ ವರದಿ ಪಡೆದು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಗೃಹಜ್ಯೋತಿ ಯೋಜನೆಯಡಿ 38,575 ಗ್ರಾಹಕರಿದ್ದು, ಗೃಹಜ್ಯೋತಿಗೆ ಒಳಪಟ್ಟವರು 37,670 ಗ್ರಾಹಕರು, ಅವರು ಬಳಸಿದ ಯೂನಿಟ್ 15,88,674, ಅದಕ್ಕೆ ತಗುಲಿದ ವೆಚ್ಚ 21,531 (ಕೋಟಿಗಳಲ್ಲಿ) ಸರ್ಕಾರದಿಂದ ಬಿಡುಗಡೆಯಾದ ಮೊತ್ತ 168 ಕೋಟಿ ಎಂದು ಹೊನ್ನಾಳಿ ಬೆಸ್ಕಾಂ ಎಇಇ ಶ್ರೀನಿವಾಸ್ ಹೇಳಿದರು.
ಮೇ ತಿಂಗಳಲ್ಲಿ ಶಕ್ತಿ ಯೋಜನೆಯಡಿ 4,97,907 ಮಹಿಳೆಯರು ಪ್ರಯಾಣಿಸಿದ್ದು, ಅದರ ಬಾಬ್ತು 2,14,02,188 ರೂ.ಗಳನ್ನು ಸರ್ಕಾರ ಭರಿಸಿದೆ ಎಂದು ಕೆಎಸ್‌ಆರ್‌ಟಿಸಿ ಹೊನ್ನಾಳಿ ಡಿಪೋ ಸೂಪರ್‌ವೈಸರ್ ಮಂಜುನಾಥ್ ಮಾಹಿತಿ ನೀಡಿದರು.
ಬಿಎಸ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಾಂಕದವರೆಗೆ ಪಾಸ್ ನೀಡಲಾಗಿದೆ. ಆದರೆ ಲ್ಯಾಬ್ ಪರೀಕ್ಷೆ ಎಂಟತ್ತು ದಿನಗಳವರೆಗೆ ಇದ್ದು, ಹಣ ಕೊಟ್ಟ ಪ್ರಯಾಣಿಸಬೇಕಾಗಿದೆ. ಆದ್ದರಿಂದ ಪಾಸ್ ಅವಧಿ ವಿಸ್ತರಿಸಬೇಕು ಎಂದು ಪಾಲಕರು ಮನವಿ ಮಾಡಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಗದ್ದಿಗೇಶ್ ಹುಣಸಘಟ್ಟ ಹೇಳಿದರು. ತಾಪಂ ಇಒ ಧರಣೇಶ್, ಸಮಿತಿ ಸದಸ್ಯರಾದ ರಂಗಪ್ಪ ಬೆನಕನಹಳ್ಳಿ, ಸಾಸ್ವೇಹಳ್ಳಿ ಕೃಷ್ಣಮೂರ್ತಿ, ಶೋಭಾ, ಮಂಜುನಾಥ್, ಕೃಷ್ಣಾಚಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net