18,100 ಕೋಟಿ ರೂ. ಮೊತ್ತದ ಎಸಿಸಿ ಬ್ಯಾಟರಿ ಪಿಎಲ್‌ಐ ಯೋಜನೆಯಡಿ ದೇಶದಲ್ಲಿ 50 ಗಿಗಾವಾಟ್ ಹವರ್ಸ್ ಬ್ಯಾಟರಿ ಉತ್ಪಾದನಾ ಸಾಮರ್ಥ್ಯ ನಿರ್ಮಿಸುವ ಗುರಿ ಇದೆ. ಈವರೆಗೆ 5,180 ಕೋಟಿ ರೂ. ಹೂಡಿಕೆ ಮಾಡಿದ್ದು, 1,277 ನೇರ ಉದ್ಯೋಗಗಳು ಸೃಷ್ಟಿಯಾಗಿವೆ. 10,900 ಕೋಟಿ ರೂ. ವೆಚ್ಚದ ಪಿಎಂ-ಇ-ಡ್ರೈವ್ ಯೋಜನೆಯಡಿ ಎಲೆಕ್ಟ್ರಿಕ್ ದ್ವಿಚಕ್ರ, ತ್ರಿಚಕ್ರ, ಟ್ರಕ್, ಬಸ್ ಹಾಗೂ ಆಂಬುಲೆನ್ಸ್ ಉತ್ಪಾದನೆಗೆ ಬೆಂಬಲ ನೀಡಲಾಗುತ್ತಿದ್ದು, ಇವಿ ಚಾರ್ಜಿಂಗ್ ಮೂಲಸೌಕರ್ಯ ಹಾಗೂ ಪರೀಕ್ಷಾ ಕೇಂದ್ರಗಳ ಆಧುನೀಕರಣಕ್ಕೂ ನೆರವು ನೀಡಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದೆ.