ಕ್ಷೇತ್ರದ ಯರಗುಂಟೆ, ಎಸ್‌ಜೆಎಂ ನಗರ, ಹೊಳೆಹೊನ್ನೂರು ತೀಟ, ಕುರುಬರ ಕೇರಿ, ಎಸ್‌ಪಿಎಸ್ ನಗರ, ದೇವರಾಜ ಅರಸು ಬಡಾವಣೆ, ಜಾಲಿನಗರ, ಶಿವಾಲಿ ಚಿತ್ರಮಂದಿರ ರಸ್ತೆ, ಹೊಂಡದ ವೃತ್ತ, ಸಿಬಾರ ರಸ್ತೆ ಇನ್ನಿತರ ಪ್ರದೇಶಗಳಲ್ಲಿ ಹೊಸ ಮತಗಟ್ಟೆಗಳನ್ನು ರಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮತಗಟ್ಟೆ ಮಟ್ಟದ ಏಜೆಂಟರನ್ನು ನೇಮಕ ಮಾಡುವಂತೆ ರಾಜಕೀಯ ಪಕ್ಷಗಳಿಗೆ ತಿಳಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.