ಮಳೆ-ಗಾಳಿಯಿಂದ 60 ಎಕರೆ ಬೆಳೆ ಹಾನಿ

ದಾವಣಗೆರೆಯಲ್ಲಿ ಶುಕ್ರವಾರ ಬೆಳಗ್ಗೆ ಸುರಿದ ಮಳೆಯಿಂದ ಶಂಕರ ವಿಹಾರ ಬಡಾವಣೆಯ ರಸ್ತೆಯಲ್ಲಿ ನೀರು ನಿಂತಿದ್ದ ದೃಶ್ಯ.
ದಾವಣಗೆರೆಯಲ್ಲಿ ಶುಕ್ರವಾರ ಬೆಳಗ್ಗೆ ಸುರಿದ ಮಳೆಯಿಂದ ಶಂಕರ ವಿಹಾರ ಬಡಾವಣೆಯ ರಸ್ತೆಯಲ್ಲಿ ನೀರು ನಿಂತಿದ್ದ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ 28.25 ಲಕ್ಷ ರೂ. ನಷ್ಟ
  • ಮನೆಗಳಿಗೆ ನುಗ್ಗಿದ ನೀರು
ದಾವಣಗೆರೆ : ಜಿಲ್ಲೆಯಲ್ಲಿ ಗುರುವಾರ 23.3 ಮಿ.ಮೀ. ಮಳೆಯಾಗಿದ್ದು ಬೆಳೆ ಹಾನಿ, ಮನೆಗಳು ಬಿದ್ದಿರುವುದು ಸೇರಿ 28.25 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ.
ಜಗಳೂರು ತಾಲೂಕಿನಲ್ಲಿ 25.90 ಎಕರೆ ಪಪ್ಪಾಯಿ, 15 ಎಕರೆ ಬಾಳೆ, 10 ಎಕರೆ ಈರುಳ್ಳಿ, ದಾವಣಗೆರೆ ತಾಲೂಕು ಮುದಹದಡಿಯಲ್ಲಿ 4 ಎಕರೆ, ಬಲ್ಲೂರಿನಲ್ಲಿ 6 ಎಕರೆ ಭತ್ತ ಸೇರಿ 60.90 ಎಕರೆ ಬೆಳೆ ಹಾನಿಯಾಗಿದೆ. ಜಗಳೂರು ತಾಲೂಕಿನಲ್ಲಿ 11 ಮನೆಗಳು ಬಿದ್ದಿವೆ.
ಜಗಳೂರು ತಾಲೂಕಿನಲ್ಲಿ ಅತಿಹೆಚ್ಚು 38.7 ಮಿ.ಮೀ, ದಾವಣಗೆರೆ 34.3 ಮಿ.ಮೀ, ಚನ್ನಗಿರಿ 13.8 ಮಿ.ಮೀ, ಹರಿಹರ 26.6 ಮಿ.ಮೀ, ಹೊನ್ನಾಳಿ 5 ಮಿ.ಮೀ, ನ್ಯಾಮತಿ ತಾಲೂಕಿನಲ್ಲಿ 5.6 ಮಿ.ಮೀ. ಮಳೆಯಾಗಿದೆ.
ಶುಕ್ರವಾರ ಬೆಳಗಿನ ಜಾವ ದಾವಣಗೆರೆ ನಗರ ಸೇರಿ ಜಿಲ್ಲೆಯ ವಿವಿಧೆಡೆ ಮಳೆ ಆರ್ಭಟಿಸಿತು. ನಗರದ ಶಂಕರ ವಿಹಾರ ಬಡಾವಣೆಯಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿತ್ತು. ಚರಂಡಿ ಸೌಲಭ್ಯ ಇಲ್ಲದ ಕಾರಣ ರಸ್ತೆಯಲ್ಲಿ ನೀರು ನಿಂತು ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸಿದರು.
ನಗರದ ಎಸ್.ಎಸ್. ಬಡಾವಣೆ, ಪಿ.ಜೆ. ಬಡಾವಣೆ, ವಿದ್ಯಾನಗರ ಇನ್ನಿತರ ಭಾಗಗಳಲ್ಲಿ 8-10 ಮರಗಳು ಬಿದ್ದಿದ್ದು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು. ಪಿಬಿ ರಸ್ತೆ, ರಿಂಗ್ ರಸ್ತೆ ಮುಂತಾದ ಕಡೆ ಒಳಚರಂಡಿ ನೀರು ತುಂಬಿ ರಸ್ತೆ ಮೇಲೆ ಹರಿಯಿತು. ಜಿಲ್ಲಾ ಕ್ರೀಡಾಂಗಣ, ಸರಸ್ವತಿ ನಗರದ ಖಾಲಿ ನಿವೇಶನಗಳು ಮತ್ತು ಬಸಾಪುರ ರಸ್ತೆಯಲ್ಲಿ ನೀರು ನಿಂತಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net