ಬುಧವಾರ ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಪ್ರಸ್ತುತ ಒಂದು ಮನೆ ಕಟ್ಟಬೇಕಾದರೆ 7.5 ಲಕ್ಷ ರೂ. ಬೇಕಾಗುತ್ತದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ 1.5 ಲಕ್ಷ ರೂ., ರಾಜ್ಯ ಸರ್ಕಾರದಿಂದ ಎಸ್ಸಿ- ಎಸ್ಟಿಯವರಿಗೆ 2 ಲಕ್ಷ ರೂ., ಸಾಮಾನ್ಯ ವರ್ಗದವರಿಗೆ 1.20 ಲಕ್ಷ ರೂ. ಕೊಡಲಾಗುತ್ತಿದೆ. ಕೇವಲ 3 ಲಕ್ಷ ರೂ. ಗಳಿಂದ ಮನೆ ನಿರ್ಮಿಸುವು ಕಷ್ಟ. ಹಾಗಾಗಿ ನಾನು ಮಂತ್ರಿಯಾದ ಮೇಲೆ ದೊಡ್ಡ ಮೊತ್ತದಲ್ಲಿ ಅಂದರೆ ರಾಜ್ಯ ಸರ್ಕಾರವೇ 4 ಲಕ್ಷ ರೂ. ನೀಡಲು ಮುಂದಾಗಿದೆ ಎಂದರು.