12ನೇ ಶತಮಾನದ ಯುಗ ಪುರುಷ

ಚನ್ನಗಿರಿ ತಾಲೂಕಿನ ನಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶರಣ ಚನ್ನಬಸಣ್ಣನವರ ಜಯಂತ್ಯುತ್ಸವವನ್ನು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಉದ್ಘಾಟಿಸಿದರು. ಜಿ.ಬಿ. ಚಂದ್ರಶೇಖರಪ್ಪ, ಎಂ.ಎಸ್. ಜಯಪ್ಪ. ವಡ್ನಾಳ್ ರಾಜಣ್ಣ, ಎಚ್.ಎಸ್. ಶಿವಕುಮಾರ್, ಶರಣಪ್ಪ ಕೋಗಲೂರು, ರಾಜಶೇಖರಪ್ಪ ಇದ್ದರು.
ಚನ್ನಗಿರಿ ತಾಲೂಕಿನ ನಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶರಣ ಚನ್ನಬಸಣ್ಣನವರ ಜಯಂತ್ಯುತ್ಸವವನ್ನು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಉದ್ಘಾಟಿಸಿದರು. ಜಿ.ಬಿ. ಚಂದ್ರಶೇಖರಪ್ಪ, ಎಂ.ಎಸ್. ಜಯಪ್ಪ. ವಡ್ನಾಳ್ ರಾಜಣ್ಣ, ಎಚ್.ಎಸ್. ಶಿವಕುಮಾರ್, ಶರಣಪ್ಪ ಕೋಗಲೂರು, ರಾಜಶೇಖರಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಶ್ರೀ ಹೇಳಿಕೆ
  • ಶರಣ ಚನ್ನಬಸಣ್ಣನವರ ಜಯಂತ್ಯುತ್ಸವ
  • ಶೈವಾಚಾರ ನಿರೂಪಣೆಗೆ ಚನ್ನಬಸವಣ್ಣ ಹೆಸರುವಾಸಿ
ಚನ್ನಗಿರಿ: ಭಕ್ತಿಗೆ ಬಸವಣ್ಣ, ಜ್ಞಾನಕ್ಕೆ ಅಲ್ಲಮಪ್ರಭು ಪ್ರಸಿದ್ಧಿಯಾಗಿರುವಂತೆ ಶೈವಾಚಾರ ನಿರೂಪಣೆಗೆ ಚನ್ನಬಸವಣ್ಣ ಹೆಸರಾಗಿದ್ದಾರೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ನಾರಶೆಟ್ಟಿಹಳ್ಳಿ ಗ್ರಾಮದ ಈಶ್ವರ ದೇವಸ್ಥಾನದ ಅವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶರಣ ಚನ್ನಬಸಣ್ಣನವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಇವರು ಸೃಷ್ಟಿಶಾಸ್ತ್ರ ಮತ್ತು ಮನ ಶಾಸ್ತ್ರವನ್ನು ಬಹು ವಿಸ್ತಾರವಾಗಿ ವಚನಗಳಲ್ಲಿ ನಿರೂಪಿಸಿದ್ದಾರೆ. ಬದುಕಿದ್ದು ಕೇವಲ 24 ವರ್ಷವಾದರೂ ಹನ್ನೆರಡನೇ ಶತಮಾನದ ಯುಗ ಪುರುಷರಾಗಿ, ಸಾಮಾಜಿಕ ಬದ ಲಾವಣೆಗಳ ಹರಿಕಾರರಾಗಿ ಅಸಮಾನತೆಯ ವಿರುದ್ಧ ಧ್ವನಿಯೆತ್ತಿದ್ದಾರೆ ಎಂದರು. ಚನ್ನಬಸವಣ್ಣನವರು ಕ್ರಿಶ 1156 ರಲ್ಲಿ ಸ್ಥಾಪಿತವಾದ ಶಿವಾನುಭವ ಮಂಟಪದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. 12ನೇ ಶತಮಾನದ ಶರಣರು ಆಸೆ, ಆಮಿಷಗಳಿಗೆ ದಾಸರಾದವರಲ್ಲ. ಸಂಪತ್ತು, ಅಧಿಕಾರಕ್ಕೆ ಅಂಟಿಕೊಂಡು ಕೂರಲಿಲ್ಲ. ನಾಳೆಗೆ ಬೇಕೆಂದು ಕೂಡಿಡಲಿಲ್ಲ. ಕಾಯಕ ದಾಸೋಹ, ಇಷ್ಟಲಿಂಗ ಪೂಜೆ ಅವರ ಬದುಕಿನ ಸಿದ್ಧಾಂತವಾಗಿದ್ದವು. ಸಮಾಜದ ಪಿಡುಗುಗಳನ್ನು ದೂರ ಮಾಡಿ ಸಮಾನತೆ ತರುವ ಪ್ರಯತ್ನ ಮಾಡಿದ್ದರು ಎಂದು ತಿಳಿಸಿದರು.
ನಿವೃತ್ತ ಪ್ರಾಚಾರ್ಯ ಜಿ.ಬಿ. ಚಂದ್ರಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಎಂ.ಎಸ್. ಜಯಪ್ಪ, ಮಾಜಿ ಶಾಸಕ ವಡ್ನಾಳ್ ರಾಜಣ್ಣ, ತುಮ್‌ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಚಿಂತಕ ಶರಣಪ್ಪ ಕೋಗಲೂರು, ನಿವೃತ ಶಿಕ್ಷಕ ರಾಜಶೇಖರಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net