ಜಗಳೂರಿನಲ್ಲಿ 11.5 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ

ಸುಳಿವು ಆಧರಿಸಿ ದಾಳಿ ಮಾಡಿದ ಅಧಿಕಾರಿಗಳು
Anna Bhagya
ಜಗಳೂರಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿ ದಾಸ್ತಾನು ಮಾಡಿದ್ದ ಹಳೇ ಮನೆ.Anna Bhagya
Published on: 

ಜಗಳೂರು: ಪಟ್ಟಣದ ಹಳೇ ತಾಲೂಕು ಕಚೇರಿಯ ಮುಖ್ಯ ರಸ್ತೆಯ 6ನೇ ಕ್ರಾಸ್ ಅಂಗನವಾಡಿ ಬಳಿ ಇರುವ ಪಾಳುಬಿದ್ದ ಮನೆಯಲ್ಲಿ ದಾಸ್ತಾನು ಮಾಡಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಗುರುವಾರ ಆಹಾರ ನಿರೀಕ್ಷಕ ಶಿವಪ್ರಕಾಶ್ ನೇತೃತ್ವದ ತಂಡ ದಾಳಿ ನಡೆಸಿ, ವಶಕ್ಕೆ ಪಡೆದುಕೊಂಡಿದೆ.

ಬಡವರ ಹಸಿವು ನೀಗಿಸುವ ಉದ್ದೇಶದಿಂದ ಸರ್ಕಾರ ಉಚಿತವಾಗಿ ವಿತರಣೆ ಮಾಡಿದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಲಭಿಸಿದ ಸುಳಿವು ಆಧರಿಸಿ ಆಹಾರ ನಿರೀಕ್ಷಕ ಶಿವಪ್ರಕಾಶ್ ನೇತೃತ್ವದ ತಂಡ ಬೆಳಗ್ಗೆ ದಾಳಿ ನಡೆಸಿದಾಗ 11.5 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದೆ. ಆದರೆ ಯಾರು ಅಕ್ಕಿ ದಾಸ್ತಾನು ಮಾಡಿದ್ದಾರೆ. ಇದಕ್ಕೆ ಕಾರಣ ಯಾರು ಎಂಬುವುದು ಪತ್ತೆಯಾಗಿಲ್ಲ. ಹಾಗಾಗಿ ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net