ಒಗ್ಗಟ್ಟಿದ್ದರೆ ಸಮಾಜದ ಪ್ರಗತಿ ಖಚಿತ: ಎಸ್‌ಎಸ್‌ಕೆ ಅಧ್ಯಕ್ಷ ಅಭಿಪ್ರಾಯ

ಹರಿಹರ ನಗರದ ದೇವಸ್ಥಾನ ರಸ್ತೆಯ ಸಹಸ್ರಾರ್ಜುನ ವೃತ್ತದಲ್ಲಿ ಸಹಸ್ರಾರ್ಜುನ ಮಹಾರಾಜರ ಜಯಂತಿ ಆಚರಿಸಲಾಯಿತು. ಶಶಿಕುಮಾರ್ ಮೆಹರವಾಡೆ, ಎಸ್.ರಾಮಪ್ಪ, ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್, ನಂದಿಗಾವಿ ಶ್ರೀನಿವಾಸ್ ಇತರರಿದ್ದರು.
ಹರಿಹರ ನಗರದ ದೇವಸ್ಥಾನ ರಸ್ತೆಯ ಸಹಸ್ರಾರ್ಜುನ ವೃತ್ತದಲ್ಲಿ ಸಹಸ್ರಾರ್ಜುನ ಮಹಾರಾಜರ ಜಯಂತಿ ಆಚರಿಸಲಾಯಿತು. ಶಶಿಕುಮಾರ್ ಮೆಹರವಾಡೆ, ಎಸ್.ರಾಮಪ್ಪ, ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್, ನಂದಿಗಾವಿ ಶ್ರೀನಿವಾಸ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹರಿಹರದಲ್ಲಿ ಸಹಸ್ರಾರ್ಜುನ ಮಹಾರಾಜರ ಜಯಂತಿ
  • ಶ್ರೀ ಸಹಸ್ರಾರ್ಜುನ ಪುತ್ಥಳಿ ಲೋಕಾರ್ಪಣೆ
  • ಸೋಮವಂಶ ಕ್ಷತ್ರಿಯ ಸಮುದಾಯದಿಂದ ಜಯಂತ್ಯುತ್ಸವ
ಹರಿಹರ: ಯಾವುದೇ ಸಮಾಜದ ಜನಸಂಖ್ಯೆ ಕಡಿಮೆಯಿದ್ದರೂ ಸಹ, ನಡವಳಿಕೆ, ಶ್ರಮ, ನಿಷ್ಠೆ ಹಾಗೂ ಒಗ್ಗಟ್ಟಿನಿಂದ ನಡೆದುಕೊಂಡರೆ ಆ ಸಮಾಜದ ಪ್ರಗತಿ ಖಚಿತ ಎಂದು ಎಸ್‌ಎಸ್‌ಕೆ (ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ) ಸಮಾಜದ ರಾಜ್ಯಾಧ್ಯಕ್ಷ ಶಶಿಕುಮಾರ್ ಮೆಹರವಾಡೆ ಹೇಳಿದರು.

ನಗರದ ದೇವಸ್ಥಾನ ರಸ್ತೆಯ ಸಹಸ್ರಾರ್ಜುನ ವೃತ್ತದಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಯುವಪಡೆಗೆ ಮೆಹರವಾಡೆ ಶ್ಲಾಘನೆ

"ಈ ಬಾರಿ ಮಹೋತ್ಸವದಲ್ಲಿ ಬೈಕ್ ರ‌್ಯಾಲಿ, ಕ್ರೀಡಾಕೂಟ, ಮೆರವಣಿಗೆ ಸೇರಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ. ಯುವ ಪಡೆಯು ಭವ್ಯವಾಗಿ ನಿರ್ಮಿಸಿರುವ ಶ್ರೀ ಸಹಸ್ರಾರ್ಜುನ ಮಹಾರಾಜರ ಪುತ್ಥಳಿಯ ಲೋಕಾರ್ಪಣೆ ಸಮಾಜದ ಗೌರವವನ್ನು ಹೆಚ್ಚಿಸಿದೆ. ಶಿಸ್ತು, ಆತ್ಮ ಗೌರವ ಮತ್ತು ಒಗ್ಗಟ್ಟಿನಿಂದ ಎಸ್‌ಎಸ್‌ಕೆ ಸಮಾಜ ಮುನ್ನಡೆಯಬೇಕು" ಎಂದು ಅವರು ಕರೆ ನೀಡಿದರು.

ಧರ್ಮ ರಕ್ಷಣೆಗೆ ಪೂರಕ: ಶಾಸಕ ಹರೀಶ್

ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಪಿ. ಹರೀಶ್, ಎಸ್‌ಎಸ್‌ಕೆ ಸಮುದಾಯವು ಧಾರ್ಮಿಕ ಪರಂಪರೆಯನ್ನು ಉಳಿಸಿಕೊಂಡು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿರುವುದು ಸಂತಸದ ಸಂಗತಿ. ಯುವಪಡೆ ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಧರ್ಮ ರಕ್ಷಣೆಗೆ ಪೂರಕವಾಗಿದೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ಮತ್ತು ಗೌರವ

ಇದೇ ವೇಳೆ, ಕಲಬುರ್ಗಿಯ ದಿವಂಗತ ಪರಶುರಾಮ ಸಾ. ತುಳಜಾ ರಾಮಸಾ ಅವರಿಗೆ ಮರಣೋತ್ತರವಾಗಿ 'ಶ್ರೀ ಸಹಸ್ರಾರ್ಜುನ ಸೇವಾ ಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೆ, ಕರ್ನಾಟಕ ಮರಾಠ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷ ಜಿ.ಎಚ್. ಮರಿಯೋಜಿ ರಾವ್ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್. ರಾಮಪ್ಪ, ಬಿಜೆಪಿ ಮುಖಂಡರಾದ ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ್ ಎನ್. ಖಿರೋಜಿ, ಅಧ್ಯಕ್ಷ ಸಂದೀಪ್ ಹೇಮಂತಸಾ ಭೂತೆ, ಪ್ರಧಾನ ಕಾರ್ಯದರ್ಶಿ ವಿನಾಯಕ ಎಂ. ಲದ್ವಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net