

ದಾವಣಗೆರೆ : ಪತಂಜಲಿ ಕಾಲೇಜ್ ಆಫ್ ಯೋಗ ರಿಸರ್ಚ್ ಸೆಂಟರ್ ಹಾಗೂ ಯೋಗ ಅಸೋಸಿಯೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಗೋವಾದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ದಾವಣಗೆರೆಯ ಎಸ್.ಎ.ಎಸ್.ಎಸ್. ಯೋಗ ಕೇಂದ್ರದ ಎಸ್.ಪಿ. ಲಾವಣ್ಯ ಶ್ರೀಧರ್ ಅವರು ಬಂಗಾರದ ಪದಕ ಪಡೆದಿದ್ದಾರೆ. ಲಾವಣ್ಯ ಅವರ ಈ ಸಾಧನೆಯ ಬಗ್ಗೆ ಎಸ್‌ಎಎಸ್‌ಎಸ್ ಯೋಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ. ಎನ್. ಪರಶುರಾಮ್ ಹರ್ಷ ವ್ಯಕ್ತಪಡಿಸಿದ್ದಾರೆ.