ಚುನಾವಣೆ ಬಂದಾಗ ಬಿಜೆಪಿ ಗಿಮಿಕ್

Yatindra-siddaramaiha.jpg
Published on

ದಾವಣಗೆರೆ : ಪ್ರತಿ ಬಾರಿ ಚುನಾವಣೆ ಬಂದಾಗ ಬಿಜೆಪಿಯವರು ಏನಾದರೂ ಗಿಮಿಕ್ ಮಾಡುತ್ತಾರೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
 ತಾಲೂಕಿನ ರುದ್ರನಕಟ್ಟೆ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಪ್ರತಿ ಬಾರಿ ಚುನಾವಣಾ ಸಮಯದಲ್ಲಿ ಯಾವುದೇ ಕೆಳಮಟ್ಟಕ್ಕೆ ಇಳಿಯಲು ಹೇಸುವುದಿಲ್ಲ. ಕಳೆದ ಬಾರಿ ಪುಲ್ವಾಮಾ ದಾಳಿ ಬಳಸಿದ್ದರು. ಗೋಧ್ರಾ ಹತ್ಯಾಕಾಂಡದ ಲಾಭವನ್ನು 2014ರ ವರೆಗೆ ಪಡೆದಿದ್ದರು ಎಂದು ತಿಳಿಸಿದರು.
 ‘ಗೋಧ್ರಾ ದುರಂತದ ರೀತಿ ಮತ್ತೇನಾದರೂ ಆಗಬಹುದು. ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು’ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಪ್ರತಿ ಬಾರಿ ಬಿಜೆಪಿ ಗಿಮಿಕ್ ಮಾಡುತ್ತಿರುವುದನ್ನು ನೋಡಿ ಹರಿಪ್ರಸಾದ್ ಹೇಳಿಕೆ ನೀಡಿರಬಹುದು. ರಾಮ ಮಂದಿರ ಎಲ್ಲ ಹಿಂದುಗಳಿಗೆ ಸೇರಿದ್ದು. ಅದರ ಉದ್ಘಾಟನೆಯನ್ನು ಪಕ್ಷದ ಕಾರ್ಯಕ್ರಮದಂತೆ ಮಾಡಿ, ತಾವೇ ಮಂದಿರ ಕಟ್ಟಿಸಿದವರಂತೆ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ ಎಂದರು.
 ರಾಮ ಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡದೇ ಇರುವ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ತಮ್ಮ ರಾಜಕೀಯ ಅನುಕೂಲಕ್ಕೆ ಬೇಕಾದವರನ್ನು ಕರೆಯುತ್ತಿದ್ದಾರೆ ಎಂದು ಟೀಕಿಸಿದರು.
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net