

ದಾವಣಗೆರೆ: ಎವಿಕೆ ಮಹಿಳಾ ಕಾಲೇಜಿನ ಮನೋವಿಜ್ಞಾನ ವಿಭಾಗದಿಂದ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಸೈಕೋಡ್ರಾಮಾ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿ, ನಟಿ ಮೇದಿನಿ ಕೆಳಮನೆ ಅವರು ಮನಸ್ಸಿನಲ್ಲಿ ಹುದುಗಿರುವ ಘಟನೆ, ಭಾವನೆ ಹಾಗೂ ಯೋಜನಾ ಲಹರಿಗಳನ್ನು ಹೊರ ಹಾಕುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಕಮಲಾ ಸೊಪ್ಪಿನ್ ಮಾತನಾಡಿ, ಸದೃಢ ಮನಸ್ಸು, ಸದೃಢ ದೇಹ ಎಂಬಂತೆ ಕಾರ್ಯಾಗಾರ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಪ್ರೊ.ಫಾಲಾಕ್ಷಪ್ಪ ಪ್ರಾಸ್ತಾವಿಕ ಮಾತನಾಡಿ, ಇದು ಜೀವನವನ್ನು ಆಧರಿಸಿದ ಕಲಾ ಚಿಕಿತ್ಸೆ, ಜನರ ಭಾವನೆ ಹಾಗೂ ಇತರೆ ವ್ಯಕ್ತಿಯ ದೃಷ್ಠಿಕೋನ ಅರ್ಥೈಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಪ್ರೊ.ಆರ್.ಚನ್ನಬಸವನಗೌಡ, ಡಾ.ಜಿ.ಬಿ.ಮಂಜುಳಾ ಇದ್ದರು. ಬಿ.ಆರ್.ವಿದ್ಯಾ ಸ್ವಾಗತಿಸಿದರು. ವೆರೋನಿಕ ಕೆಲಿನ್ ನಿರೂಪಿಸಿದರು. ರಂಶಾ ರೆಹಮಾನ್ ವಂದಿಸಿದರು.