ಮಗುವಿನೊಂದಿಗೆ ನದಿಗೆ ಹಾರಲು ಹೋಗಿದ್ದ ಮಹಿಳೆಯ ರಕ್ಷಣೆ

Crime_20250701001843967.jpg
Published on

ದಾವಣಗೆರೆ  : ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತುಂಗಭದ್ರಾ ಸೇತುವೆ ಬಳಿ ಮಹಿಳೆಯೊಬ್ಬರು ಮಗುವಿನೊಂದಿಗೆ ತುಂಗಭದ್ರಾ ನದಿಗೆ ಹಾರಲು ಪ್ರಯತ್ನಿಸಿದಾಗ ಹೊಯ್ಸಳ ತುರ್ತು ಸ್ಪಂದನೆ ತಂಡವು ರಕ್ಷಿಸಿದೆ.  ಆ ಮಹಿಳೆಯನ್ನು ಗಮನಿಸಿದ ಸ್ಥಳೀಯರೊಬ್ಬರು ಕೂಡಲೇ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಕಾರ್ಯ ಪ್ರವೃತ್ತರಾದ ಹೊಯ್ಸಳ ಅಧಿಕಾರಿಗಳಾದ ಎ.ಎಸ್.ಐ ಅಶೋಕ ರೆಡ್ಡಿ, ವಾಹನ ಚಾಲಕ ಲೋಕೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.  ಸಂತ್ರಸ್ತೆಗೆ ಸಾಂತ್ವನ ಮಾಡಿ ವಿಚಾರಿಸಿದರು. ಆಕೆ ಹೊನ್ನಾಳಿ ತಾಲೂಕಿನವರೇ ಆಗಿದ್ದು ಕೌಟುಂಬಿಕ ಕಲಹದಿಂದ ಮನನೊಂದು ನದಿಗೆ ಹಾರುವ ನಿರ್ಧಾರಕ್ಕೆ ಬಂದಿದ್ದಳು.  ಸಂತ್ರಸ್ತೆ ಹಾಗೂ ಮಗುವನ್ನು ಹೊನ್ನಾಳಿ ಠಾಣೆಗೆ ಕರೆದೊಯ್ಯಲಾಯಿತು. ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಅವರು ಮಹಿಳೆಗೆ ಸಾಂತ್ವನ ಹೇಳಿ, ಧೈರ್ಯ ತುಂಬಿ ಉಪಚರಿಸಿದರು. ಸಂತ್ರಸ್ತೆ ಮತ್ತು ಮಗುವನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಟ್ಟರು.  ಪೊಲೀಸ್‌ಗೆ ಸಂಬಂಧಿಸಿದಂತೆ ಯಾವುದೇ ತುರ್ತು ಸೇವೆಗಾಗಿ ತುರ್ತು ಸಹಾಯವಾಣಿ 112 ಕ್ಕೆ ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.  ...    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net