ಶೂನ್ಯ ತ್ಯಾಜ್ಯದ ಮಾದರಿ ವಾರ್ಡ್ ಸಂಕಲ್ಪ

dvg-s.s.-layout_20250718005214194.jpg
Published on

ರಮೇಶ ಜಹಗೀರದಾರ್ ದಾವಣಗೆರೆ  : ಪರಿಸರ ಪೂರಕ ಅಭ್ಯಾಸಗಳನ್ನು ಜನರಲ್ಲಿ ರೂಢಿ ಮಾಡಿದರೆ ಸ್ವಚ್ಛ, ಸುಂದರ ನಗರವಾಗಿಸಲು ಸಾಧ್ಯವಿದೆ. ಈ ಪ್ರಯತ್ನ ನಮ್ಮ ಮನೆಯಿಂದಲೇ ಆರಂಭವಾಗಬೇಕು. ಮಹಾನಗರ ಪಾಲಿಕೆಯ 23ನೇ ವಾರ್ಡ್‌ನ ಎಸ್.ಎಸ್. ಬಡಾವಣೆಯಲ್ಲಿ ಈ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.  ಸ್ವಚ್ಛ ಭಾರತ್ ಮಿಷನ್ ಅಂಗವಾಗಿ ಪರಿವರ್ತನಾ ವೇದಿಕೆಯ ಜತೆಗೂಡಿ, ಬಡಾವಣೆಯ ನಾಗರಿಕರನ್ನು ಒಳಗೊಂಡು ಮಾದರಿ ವಾರ್ಡ್ ಆಗಿಸುವ ಸಂಕಲ್ಪ ಮಾಡಲಾಗಿದೆ. ಸಮುದಾಯದ ಸಹಭಾಗಿತ್ವದಲ್ಲಿ ಅಭಿಯಾನ ಕೈಗೊಂಡು ಒಂದಿಷ್ಟು ಬದಲಾವಣೆ ತರಲು ಕಾರ್ಯಯೋಜನೆ ರೂಪಿಸಲಾಗಿದೆ. ಶನಿವಾರ ಇದಕ್ಕೆ ಚಾಲನೆ ದೊರೆಯಲಿದೆ.  ಮೊದಲ ಹಂತದಲ್ಲಿ ಎಸ್.ಎಸ್. ಬಡಾವಣೆ ‘ಎ’ ಬ್ಲಾಕ್‌ನ 1 ರಿಂದ 6ನೇ ಕ್ರಾಸ್ ವರೆಗೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ಬಡಾವಣೆಯ ಬೀದಿಗಳು, ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ.  ಈ ಅಭಿಯಾನದಲ್ಲಿ ಬಡಾವಣೆಯ 150 ನಿವಾಸಿಗಳು ಸ್ವಯಂ ಸೇವಕರಾಗಿ ಕೆಲಸ ಮಾಡಲಿದ್ದಾರೆ. ಅಲ್ಲಿರುವ 500ಕ್ಕೂ ಹೆಚ್ಚು ಮನೆಗಳನ್ನು ತಲುಪಿ, ಜನರಿಗೆ ಅರಿವು ಮೂಡಿಸಲಿದ್ದಾರೆ.  ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net