ಸ್ವಚ್ಛತೆಗಾಗಿ ಜಾಗೃತಿ ನಡಿಗೆ

nadige.jpg
Published on

ದಾವಣಗೆರೆ : ರೋಟರಿ ದೇವನಗರಿ ವಲಯದ ನೇತೃತ್ವದಲ್ಲಿ ನಗರದ ಎಲ್ಲ ರೋಟರಿ ಮತ್ತು ಇನ್ನರ್‌ವೀಲ್ ಕ್ಲಬ್‌ಗಳ ಸಹಕಾರದೊಂದಿಗೆ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಸೋಮವಾರ ಸ್ವಚ್ಛ ಭಾರತ್ ಕುರಿತು ಜಾಗೃತಿ ನಡಿಗೆಯನ್ನು ಮಾಡಲಾಯಿತು.
 ನಗರದ ಎಂ.ಸಿ. ಮೋದಿ ವೃತ್ತದಿಂದ ವಿದ್ಯಾನಗರದ ಮೊದಲ ಬಸ್ ನಿಲ್ದಾಣದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆಯ ವರೆಗೆ ನಡೆದ ಈ ಅಭಿಯಾನದಲ್ಲಿ ಎಜು-ಏಷ್ಯಾ, ಎಂ.ಎನ್.ಎಸ್ ಕಾನ್ವೆಂಟ್ ಮತ್ತು  ದೆಹಲಿ ಪಬ್ಲಿಕ್ ಸ್ಕೂಲ್‌ನ 400 ಶಾಲಾ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.
 ಈ ವೇಳೆ ಘೋಷಣೆಗಳನ್ನು ಕೂಗಲಾಯಿತು. ಮಹಾನಗರ ಪಾಲಿಕೆಯ ಸದಸ್ಯ ಕೆ. ಪ್ರಸನ್ನ ಕುಮಾರ್ ಸ್ವಚ್ಛತೆಯ ಪ್ರತಿಜ್ಞಾವಿಧಿ ಬೋಧಿಸಿದರು. ರೋಟರಿ ಕ್ಲಬ್‌ನ ಸಹಾಯಕ ಗವರ್ನರ್ ಅಂದನೂರು ಆನಂದಕುಮಾರ್, ದಾವಣಗೆರೆ ರೋಟರಿ ಕ್ಲಬ್ ಅಧ್ಯಕ್ಷೆ ಕುಸುಮಾ ವಿಜಯಾನಂದ್, ವಿದ್ಯಾನಗರ ರೋಟರಿ ಕ್ಲಬ್ ಅಧ್ಯಕ್ಷ ಕಲ್ಲಪ್ಪ, ರೋಟರಿ ಕ್ಲಬ್ ದಕ್ಷಿಣದ ಅಧ್ಯಕ್ಷ ಪುಟ್ಟೇಶಿ, ರೋಟರಿ ಮಿಡ್ ಟೌನ್‌ನ ಅಧ್ಯಕ್ಷ ಡಾ ಜಯಸಿಂಹ, ಇನ್ನರ್‌ವೀಲ್ನ ಅಧ್ಯಕ್ಷೆ ಆಶಾ ಜಗದೀಶ್ ಬೇತೂರು ಭಾಗವಹಿಸಿದ್ದರು.
 ಆರ್.ಎಸ್. ನಾರಾಯಣ ಸ್ವಾಮಿ ಸೇರಿ ಹಿರಿಯ ರೊಟೇರಿಯನ್‌ಗಳು ಮಹಾನಗರ ಪಾಲಿಕೆಯ ನಗರ ಸ್ವಚ್ಛತಾ ವಿಭಾಗದ ಹನ್ನೆರಡು ಪೌರ ಕಾರ್ಮಿಕರನ್ನು ಸನ್ಮಾನಿಸಿದರು. ಆರ್.ಟಿ. ಮೃತ್ಯುಂಜಯ, ಎಂ ಜಿ ಶ್ರೀಕಾಂತ್, ಆರ್.ಎಸ್. ರಾಜೇಂದ್ರ ಕುಮಾರ್ ಅಭಿಯಾನವನ್ನು ನಿರ್ವಹಿಸಿದರು.
 ರೊಟೇರಿಯನ್ ಪ್ರಕಾಶ್,  ಜಗದೀಶ್ ಬೇತೂರು, ವಿಕಾಸ್ ಸಾಂಘವಿ, ವಿಶ್ವನಾಥ್ ರೇವಡಿ, ಸಿದ್ದಪ್ಪ,  ಬಿಲ್ಲಳ್ಳಿ,  ಜಯಣ್ಣ,  ಈಶ್ವರ್ ಸಿಂಗ್, ಉಮೇಶ್ ಶೆಟ್ಟಿ, ಎಸ್.ಎನ್. ಮಳವಳ್ಳಿ, ಅನಿತಾ ಆನಂದ ಕುಮಾರ್, ಡಾ. ಚೈತಾಲಿ ಪಾಲ್ಗೊಂಡರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net