ಪರೋಪಕಾರದಿಂದ ಸಾಧನೆ ಮಾಡಲು ಶಕ್ತಿ

dvg-prasanna-kumar-12.jpg
Published on

ದಾವಣಗೆರೆ : ಜೀವನದಲ್ಲಿ ನಿಸ್ವಾರ್ಥ ಮನೋಭಾವ ಮತ್ತು ಪರೋಪಕಾರದ ವ್ಯಕ್ತಿತ್ವ ಅವಿಸ್ಮರಣೀಯ ಸಾಧನೆ ಮಾಡಲು ಶಕ್ತಿ ನೀಡುತ್ತದೆ ಎಂದು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಪ್ರಸನ್ನ ಕುಮಾರ್ ಹೇಳಿದರು.
 ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಪಾಲಿಕೆಯ 24ನೇ ವಾರ್ಡ್‌ನ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿ ಶುಕ್ರವಾರ, ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
 ಸಾಧಕರಾದ ಸ್ವಾಮಿ ವಿವೇಕಾನಂದ, ಎ.ಪಿ.ಜೆ. ಅಬ್ದುಲ್ ಕಲಾಮ್, ಮಂಜಮ್ಮ ಜೋಗತಿ, ಹಾಜಬ್ಬ, ಮುನಿ ವೆಂಕಟಪ್ಪ, ಎಸ್. ಸುಬ್ಬರಾಮಣ್ಣ, ಯೋಗ ಗುರು ಸ್ವಾಮಿ ಶಿವಾನಂದ, ಪ್ರಧಾನಿ ನರೇಂದ್ರ ಮೋದಿ, ರತನ್ ಟಾಟಾ, ಸುಧಾ ಮೂರ್ತಿ ಮತ್ತು ಸ್ವಾತಂತ್ರೃ ಸೇನಾನಿಗಳ ಬದುಕೇ ನಮಗೆ ಆದರ್ಶವಾಗಬೇಕು ಎಂದು ಹೇಳಿದರು.
 ಮುಖಂಡರಾದ ಪದ್ಮನಾಭ ಶೆಟ್ರು, ಕಿರಣ್, ಸಚಿನ್, ಎಣ್ಣೇರ್, ಲಿಂಗರಾಜ್, ಅರುಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net