ಬೆಳೆಹಾನಿ ವೀಕ್ಷಣೆ, ಮಕ್ಕಳೊಂದಿಗೆ ಸಂವಾದ

dvg-field-visit-28.jpg
Published on

ದಾವಣಗೆರೆ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಹಾಗೂ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಆನಗೋಡು ಹೋಬಳಿಯಲ್ಲಿ ಸೋಮವಾರ ಬೆಳೆಹಾನಿ ವೀಕ್ಷಣೆ ಮಾಡಿ ರೈತರಿಂದ ಅಹವಾಲು ಸ್ವೀಕರಿಸಿದರು.
 ಆಗಸ್ಟ್ ತಿಂಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು ಮೆಕ್ಕೆಜೋಳ ಸಂಪೂರ್ಣ ಬಾಡಿ ಹೋಗಿವೆ ಎಂದು ರೈತರು ತಮಗಾದ ನಷ್ಟದ ಬಗ್ಗೆ ವಿವರಿಸಿದರು.
 ತಾಲೂಕಿನ ವಡೇರಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಶೈಕ್ಷಣಿಕ ಚಟುವಟಿಕೆ ಮತ್ತು ಶಾಲೆಯ ಸ್ವಚ್ಛತೆ ಪರಿಶೀಲಿಸಿದರು.
 ಆನಗೋಡು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಔಷಧ ದಾಸ್ತಾನು ಕೊಠಡಿ ವೀಕ್ಷಿಸಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು. ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಸಹಾಯಕ ನಿರ್ದೇಶ ಶ್ರೀಧರಮೂರ್ತಿ, ತಹಸೀಲ್ದಾರ್ ಡಾ.ಎಂ.ಬಿ. ಅಶ್ವತ್ಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net