

ದಾವಣಗೆರೆ: ಪತ್ರಕರ್ತ, ಕವಿ ಬಿ.ಎನ್.ಮಲ್ಲೇಶ್ ಆವರ ‘ಉತ್ತರೆ ಮಳೆ’ ಕವಿತೆಯು ದಾವಣಗೆರೆ ವಿಶ್ವವಿದ್ಯಾನಿಲಯದ ಬಿ.ಎಸ್ಸಿ ಪ್ರಥಮ ವರ್ಷದ ಕನ್ನಡ ಪಠ್ಯಕ್ಕೆ ಆಯ್ಕೆಯಾಗಿದೆ. ಮಲ್ಲೇಶ್ ಅವರ ‘ಟ್ರಾೃಕುಗಳ ಮೇಲೆ ಹುಣ್ಣಿಮೆ’ ಕವನ ಸಂಕಲನದ ಕವಿತೆಯನ್ನು ಪಠ್ಯಕ್ಕೆ ಅಳವಡಿಸಿಕೊಳ್ಳಲಾಗಿದೆ ಎಂದು ದಾವಣಗೆರೆ ವಿವಿ ಸ್ನಾತಕ ಕನ್ನಡ ಅಧ್ಯಯನ ಮಂಡಳಿ ಅಧ್ಯಕ್ಷ ಡಾ.ಜೋಗಿನಕಟ್ಟೆ ಮಂಜುನಾಥ ತಿಳಿಸಿದ್ದಾರೆ.