ಹಳೇ ವಿದ್ಯಾರ್ಥಿಗಳ ಸಮಾಗಮ

vv_20230820005035567.jpg
Published on

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದಲ್ಲಿ ಬಯೋಟೆಕ್ನಾಲಜಿ ಫೋರಂ ಬಯೋಸ್ಪಾರ್ಕ್ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಶನಿವಾರ ಹಳೇ ವಿದ್ಯಾರ್ಥಿಗಳ ಸಮಾಗಮವನ್ನು ಏರ್ಪಡಿಸಲಾಗಿತ್ತು.
 ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಕುರಿತ ಉಪಾನ್ಯಾಸ ಕಾರ್ಯಕ್ರಮವನ್ನು ಅಜೈಮ್ ಬಯೋಸೈನ್ಸ್‌ನ ಡಾ. ರಘುನಾಥ್ ಎನ್. ನಡೆಸಿಕೊಟ್ಟರು. ಹಳೆಯ ವಿದ್ಯಾರ್ಥಿಗಳು ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು. ಈಗಿನ ವಿದ್ಯಾರ್ಥಿಗಳಿಗೆ ಉತ್ತೇಜಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರೊಂದಿಗೆ ಸಂಭ್ರಮಿಸಿದರು.
 ವಿಭಾಗದ ಮುಖ್ಯಸ್ಥರಾದ ಡಾ. ಸೀಮಾ ಜೆ. ಪಟೇಲ್, ಬಯೋಟೆಕ್ನಾಲಜಿ ವಿಭಾಗದ ಹಳೆಯ ವಿದ್ಯಾರ್ಥಿ ಸಂಘದ ಸಂಯೋಜಕ ಡಾ. ಪ್ರಭುರಾಜೇಶ್ವರ್, ಅಧ್ಯಾಪಕರಾದ ಡಾ. ನಿರಂಜನ್ ಎಂ.ಎಚ್, ಡಾ. ನವ್ಯ ಎಚ್.ಎಂ, ಮತ್ತು ಡಾ. ಚಂದ್ರಶೇಖರ್ ಎಸ್. ಇದ್ದರು.
 ವಿದ್ಯಾರ್ಥಿಗಳಾದ ಅಕ್ಷತಾ ಎಸ್.ಜಿ ಪ್ರಾರ್ಥಿಸಿದರು, ಮೇಘ ಮಗಾನಹಳ್ಳಿ ಅತಿಥಿ ಪರಿಚಯ ಮಾಡಿದರು. ಮೇಘಾ ಮುದ್ರಿ ವಂದಿಸಿದರು. ದಿವ್ಯಶ್ರೀ ಮಣ್ಣಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net