ರೈಲ್ವೆ ಅಂಡರ್‌ಬ್ರಿಡ್ಜ್ ರಸ್ತೆಯಲ್ಲಿ  ನೀರು

setuve.jpg
Published on

ದಾವಣಗೆರೆ : ಪ್ರತಿ ಬಾರಿ ದೊಡ್ಡ ಮಳೆ ಬಂದಾಗ ದಾವಣಗೆರೆ ಮಹಾನಗರ ಪಾಲಿಕೆ ಎದುರಿನ ರೈಲ್ವೇ ಅಂಡರ್ ಬ್ರಿಡ್ಜ್ ರಸ್ತೆ ಜಲಾವೃತವಾಗಿ ಸಂಪರ್ಕ ಕಡಿತವಾಗುತ್ತದೆ.  ಮಂಗಳವಾರ ರಾತ್ರಿ ಕೂಡ ಹೀಗೆ ಆಗಿದೆ.
 ರೈಲ್ವೇ ಅಂಡರ್‌ಬ್ರಿಡ್ಜ್ ರಸ್ತೆ ನಗರದ ಎರಡು ಭಾಗಗಳನ್ನು ಸಂಪರ್ಕಿಸುತ್ತದೆ.  ಮಂಗಳವಾರ ರಾತ್ರಿ ಸುರಿದ ಮಳೆಯಿಂದ ನೀರು ನಿಂತು ಸಂಚಾರಕ್ಕೆ ಅಡಚಣೆ ಆಗಿತ್ತು. ಬುಧವಾರವೂ ನೀರು ಸರಿದಿರಲಲ್ಲ.
  ಶಾಲಾ-ಕಾಲೇಜು, ಆಸ್ಪತ್ರೆ, ಮಾರುಕಟ್ಟೆ, ಜವಳಿ, ಆಭರಣದ ಅಂಗಡಿಗಳಿಗೆ ಹೋಗಲು ಈ ರಸ್ತೆ ಬಳಸುವ ಸಾರ್ವಜನಿಕರು ಇಂದು ಸುತ್ತಿ ಬಳಸಿ ತೆರಳಿದರು.
  ಪಾಲಿಕೆ ಸಿಬ್ಬಂದಿ ಪೈಪ್‌ಲೈನ್ ಕಾಮಗಾರಿ ಮೂಲಕ ನಿಂತ ನೀರನ್ನು ಸಾಗಿಸುವ ಪ್ರಯತ್ನ ಮಾಡಿದರಾದರೂ  ಸಮಸ್ಯೆ ಪರಿಹಾರವಾಗಿಲ್ಲ. ಯಥಾಸ್ಥಿತಿ ಮುಂದು ವರಿದಿದೆ.  ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net