ಜಿಲ್ಲಾದ್ಯಂತ ತುಳಸಿ ವಿವಾಹದ ಸಂಭ್ರಮ

tulasi.jpg
Published on

ದಾವಣಗೆರೆ : ಉತ್ಥಾನ ದ್ವಾದಶಿ ದಿನವಾದ ಶುಕ್ರವಾರ ಜಿಲ್ಲಾದ್ಯಂತ ತುಳಸಿ ವಿವಾಹವನ್ನು ಶ್ರದ್ಧಾ ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು.
 ಮನೆ ಮುಂದಿನ ತುಳಸಿ ವೃಂದಾವನಕ್ಕೆ ಕಬ್ಬು, ನೆಲ್ಲಿಕಾಯಿಯ ಟೊಂಗೆ ಇಟ್ಟು, ಹೂವು ಮತ್ತು ದೀಪಗಳಿಂದ ಅಲಂಕರಿಸಲಾಗಿತ್ತು. ಷೋಡಶೋಪಚಾರಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ, ದಾಮೋದರ ರೂಪಿಯಾದ ಶ್ರೀಕೃಷ್ಣ ಮತ್ತು ತುಳಸಿಯ ವಿವಾಹವನ್ನು ಆಚರಿಸಿ ಪ್ರಾರ್ಥನೆ ಸಲ್ಲಿಸಲಾಯಿತು.
 ಈ ಹಬ್ಬದ ಆಚರಣೆಯಲ್ಲಿ ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡರು. ನೆರೆಹೊರೆಯ ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ ಅರಿಷಿಣ, ಕುಂಕುಮ ನೀಡಿದರು. ಇದೇ ವೇಳೆ ಪಟಾಕಿಗಳ ಸದ್ದೂ ಕೇಳಿಬಂದಿತು.
 ತುಳಸಿಯು ಸಮುದ್ರ ಮಥನ ಕಾಲದಲ್ಲಿ ಜನಿಸಿದವಳು. ಪ್ರತಿ ನಿತ್ಯ ತುಳಸಿಯ ಪೂಜೆ ಮಾಡಬೇಕು. ತುಳಸಿಗೆ ವಿಶೇಷ ಮಹತ್ವವಿದೆ. ಆಯುರ್ವೇದ ಪದ್ಧತಿಯಲ್ಲಿ ಇದನ್ನು ಔಷಧವಾಗಿ ಬಳಸಲಾಗುತ್ತದೆ. ಪ್ರತಿನಿತ್ಯ ತುಳಸಿಯ ಸೇವನೆಯಿಂದ ರೋಗಗಳು ವಾಸಿಯಾಗುತ್ತವೆ ಎಂದು ಸಂಸ್ಕೃತ ಅಧ್ಯಾಪಕ ಕೃಷ್ಣಾಚಾರ್ ಮಣ್ಣೂರ್ ತಿಳಿಸಿದರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net