

ದಾವಣಗೆರೆ : ನಗರದ ವಿನೋಬ ನಗರದಲ್ಲಿ ಪ್ರತಿಷ್ಠಾಪಿಸಿರುವ ವರಸಿದ್ಧಿ ವಿನಾಯಕ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸೆ. 4 ರಂದು ನಡೆಯಲಿದೆ. ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಅಂದು ಬೆಳಗ್ಗೆ 11 ರಿಂದ ರಾತ್ರಿ 11 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಆದೇಶಿಸಿದ್ದಾರೆ. ಹರಿಹರದಿಂದ ದಾವಣಗೆರೆಗೆ ಹಳೇ ಪಿಬಿ ರಸ್ತೆಯ ಮೂಲಕ ಬರುವ ಎಲ್ಲ ಭಾರಿ ವಾಹನ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಹರಿಹರ ನಗರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮುಖಾಂತರ ಹೊಸ ಎನ್‌ಎಚ್-48 ರಸ್ತೆಯಿಂದ ಹಾಗೂ ಚಿತ್ರದುರ್ಗ ಕಡೆಯಿಂದ ಬರುವ ಎಲ್ಲ ವಾಹನಗಳು ಆವರಗೆರೆ ಹತ್ತಿರದ ಬಾಡಾ ಕ್ರಾಸ್ ಮೂಲಕ ಬಂದು ಸರಕು ಲಾರಿಗಳು ಡಿಸಿಎಂ ಅಂಡರ್ ಪಾಸ್ ಹತ್ತಿರದ ದನದ ಮಾರ್ಕೆಟ್ ಕ್ರಾಸ್‌ನಿಂದ ಎಪಿಎಂಸಿಗೆ ಹೋಗುವುದು. ಕೆಎಸ್‌ಆರ್‌ಟಿಸಿ ಬಸ್‌ಗಳು ಅದೇ ಮಾರ್ಗವಾಗಿ ಬಾಡಾ ಕ್ರಾಸ್ ಮುಖಾಂತರ ಆವರಗೆರೆ ಕಡಿಯಿಂದ ನೂತನ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗವಾಗಿ ಬೆಂಗಳೂರು ಬೆಳಗಾವಿ ಕಡೆಗೆ ಹೋಗುವುದು. ಖಾಸಗಿ ಬಸ್‌ಗಳು ಸಹ ಅದೇ ಆರ್ಗವಾಗಿ ಬಂದು ಎಂ.ಜಿ ಸರ್ಕಲ್ ಮೂಲಕ ನೂತನ ಖಾಸಗಿ ನಿಲ್ದಾಣಕ್ಕೆ ಬಂದು ಅದೇ ಮಾರ್ಗದಲ್ಲಿ ನಿರ್ಗಮಿಸಲು ಸೂಚಿಸಿದೆ. ಜಿಎಂಐಟಿ ಕಾಲೇಜ್ ಹತ್ತಿರ ತಾತ್ಕಾಲಿಕ ರಸ್ತೆಯ ಬದಿಯಲ್ಲಿ ನಿಲ್ಲಿಸುವ ಗೂಡ್ಸ್ ಲಾರಿಗಳನ್ನು ಹಳೇ ಪಿಬಿ ರಸ್ತೆಯ ಎರಡೂ ಬದಿಗಳಲ್ಲಿ ನಿಲ್ಲಿಸದೇ ದೂರದಲ್ಲಿ ಖಾಸಗಿ ಪಾರ್ಕಿಂಗ್ ವ್ಯವಸ್ಥೆ ಮಾಡಕೊಳ್ಳಬೇಕು. ನೂತನ ಖಾಸಗಿ ನಿಲ್ದಾಣದಿಂದ ಕಾರ್ಯಾಚರಣೆಗೊಳ್ಳುವ ಬಸ್‌ಗಳು ಎಸಿ ಕಚೇರಿ ವೃತ್ತದಿಂದ ಅರುಣ ಸರ್ಕಲ್ ಮುಖಾಂತರ ಹರಿಹರದ ಕಡೆಗೆ ಹಳೇ ಪಿಬಿ ರಸ್ತೆಗೆ ಬಾರದೇ ಗಾಂಧಿ ವೃತ್ತದ ಮೂಲಕ ಹದಡಿ ರಸ್ತೆಯಿಂದ ಕಾರ್ಯಚರಣೆಗೊಳಿಸಲು ಸೂಚಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ. ...