ದಾವಣಗೆರೆ ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನ

Crime_20250404130552225.jpg
Published on

ದಾವಣಗೆರೆ : ಇತ್ತೀಚೆಗಷ್ಟೇ ನ್ಯಾಮತಿಯ ಬ್ಯಾಂಕ್ (ಎಸ್‌ಬಿಐ) ದರೋಡೆ ಪ್ರಕರಣವನ್ನು ಜಿಲ್ಲೆಯ ಪೊಲೀಸರು ಭೇದಿಸಿದ್ದು ಇಡೀ ರಾಜ್ಯದ ಗಮನ ಸೆಳೆದಿತ್ತು. ಈಗ ನಗರದ ಚಿನ್ನ, ಬೆಳ್ಳಿ ಅಂಗಡಿಯೊಂದರಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.  ಇಲ್ಲಿನ ಮಂಡಿಪೇಟೆಯ ರವಿ ಜ್ಯೂಯಲರ್ಸ್ ಅಂಗಡಿಯಲ್ಲಿ ಕೆಲಸಗಾರರ ಗಮನವನ್ನು ಬೇರೆಡೆ ಸೆಳೆದು, 1 ಕೋಟಿ 13 ಲಕ್ಷ ರೂ. ಬೆಲೆ ಬಾಳುವ 1 ಕೆಜಿ 400 ಗ್ರಾಂ. ತೂಕದ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಲಾಗಿದ್ದು ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ...  * ಘಟನೆಯ ವಿವರ  ಮಾ. 26 ರಂದು ಮಧ್ಯಾಹ್ನ 4-5 ಜನ ಮಹಿಳೆಯರು ಹಾಗೂ ಒಬ್ಬ ಪುರುಷ ಅಂಗಡಿಗೆ ಬಂದು ಬೆಳ್ಳಿ ಲೋಟ ಖರೀದಿಸಬೇಕು ತೋರಿಸಿ ಎಂದು ಕೇಳಿದ್ದಾರೆ.  ಆಗ ಸಿಬ್ಬಂದಿ ಬೆಳ್ಳಿ ಲೋಟಗಳನ್ನು ತೋರಿಸಿದ್ದಾರೆ. ಅವುಗಳನ್ನೇ ಸ್ವಲ್ಪ ಹೊತ್ತು ನೋಡಿದ ಅವರು ತಮಗೆ ಇಷ್ಟವಾಗಿಲ್ಲ ಎಂದು ಹೇಳಿದ್ದಾರೆ.  ಆಗ ಅವರಿಗೆ ತೋರಿಸಿದ ಬೆಳ್ಳಿಯ ವಸ್ತುಗಳನ್ನು ತೆಗೆದು ಹಿಂದಕ್ಕೆ ಇಟ್ಟುಕೊಳ್ಳುವಾಗ, ಒಬ್ಬ ಮಹಿಳೆ ಅಂಗಡಿಯ ಬಂಗಾರದ ಆಭರಣಗಳ ಕೌಂಟರ್‌ನಲ್ಲಿ ಇಟ್ಟಿದ್ದ 100-105 ಜೊತೆ ಓಲೆ ಮತ್ತು ಜುಮುಕಿಗಳಿದ್ದ ಪೆಟ್ಟಿಗೆಯನ್ನು ನಮಗೆ ಗೊತ್ತಾಗದಂತೆ ಮೋಸ ಮಾಡಿ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅಂಗಡಿಯ ಮಾಲೀಕರಾದ ರೇಖಾ ತಿಳಿಸಿದ್ದಾರೆ.  ...  * ಬೆಳಕಿಗೆ ಬಂದಿದ್ದು ಹೇಗೆ?  ಅಂಗಡಿಯಲ್ಲಿ ವಾರಕ್ಕೊಮ್ಮೆ ಬಂಗಾರದ ಆಭರಣಗಳ ಲೆಕ್ಕ ತೆಗೆದುಕೊಳ್ಳುತ್ತಾರೆ. ಹಾಗೆ ಲೆಕ್ಕ ತೆಗೆದುಕೊಳ್ಳುವಾಗ ತೂಕದಲ್ಲಿ ವ್ಯತ್ಯಾಸ ಕಂಡುಬಂದಿದೆ. ಆಭರಣಗಳ 1 ಬಾಕ್ಸ್ ಕಡಿಮೆ ಇರುವುದು ಗೊತ್ತಾಗಿದೆ.  ಅಂಗಡಿಯವರು ನಂತರ ಸಿಸಿ ಕ್ಯಾಮರಾ ದೃಶ್ಯಗಳನ್ನು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.  ಪ್ರಕರಣ ದಾಖಲಿಸಿಕೊಂಡಿರುವ ಬಸವನಗರ ಠಾಣೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಕಳ್ಳತನ ಮಾಡಲು ಬಂದಿದ್ದ ಮಹಿಳೆಯರು ಬುರ್ಖಾ ಧರಿಸಿದ್ದರು. ಅವರ ಜತೆಗೆ ಬಂದಿದ್ದ ಪುರುಷ ಕ್ಯಾಪ್ ಹಾಕಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ. ಸಿಸಿ ಕ್ಯಾಮರಾ ದೃಶ್ಯಗಳಲ್ಲೂ ಇದು ಕಂಡುಬಂದಿದೆ. ಹೀಗಾಗಿ ಆರೋಪಿಗಳನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.  ...    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net