ದಾವಣಗೆರೆ : ನಗರದ ಮೌನೇಶ್ವರ ಬಡಾವಣೆಯ ಮನೆಯೊಂದರ ಬೀಗ ಮುರಿದು 100 ಗ್ರಾಂ ಚಿನ್ನವನ್ನು ಕಳ್ಳತನ ಮಾಡಲಾಗಿದೆ. ರೇವಣಸಿದ್ದಪ್ಪ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯವರು ಭಾನುವಾರ ಬಾಗಿಲು ಹಾಕಿಕೊಂಡು ಹೋಗಿದ್ದರು. ಗುರುವಾರ ವಾಪಸ್ ಬಂದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.