ಧಾರವಾಡದ ಅಮರ್ ಕ್ವಾರ್ಟರ್ ಫೈನಲ್‌ಗೆ

tenis.jpg
Published on

ದಾವಣಗೆರೆ : ಧಾರವಾಡದ ಅಗ್ರ ಶ್ರೇಯಾಂಕಿತ ಆಟಗಾರ ಡಿ. ಅಮರ್, ನಗರದಲ್ಲಿ ಶುಕ್ರವಾರ ಆರಂಭವಾದ ರಾಜ್ಯಮಟ್ಟದ ಆಹ್ವಾನಿತ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
 ಡಿಸ್ಟ್ರಿಕ್ಟ್ ಟೆನಿಸ್ ಅಸೋಸಿಯೇಷನ್‌ನಿಂದ ಟೂರ್ನಿಯನ್ನು ಆಯೋಜಿಸಲಾಗಿದ್ದು, ಹೈಸ್ಕೂಲ್ ಮೈದಾನದ ಟೆನಿಸ್ ಕ್ರೀಡಾಂಗಣದಲ್ಲಿ ನಡೆದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಅವರು ದಾವಣಗೆರೆಯ ಶ್ರೇಯಾಂಕ ರಹಿತ ಆಟಗಾರ ಎಂ. ಶ್ರೇಯಂತ್ ಅವರನ್ನು 6-0 ಅಂತರದಿಂದ ಸೋಲಿಸಿದರು.
 ಆತಿಥೇಯ ದಾವಣಗೆರೆಯ ಆಟಗಾರರಾದ ಎಸ್.ಕೆ. ವಿನಯ್ (ಅಗ್ರ ಶ್ರೇಯಾಂಕಿತ) ಮತ್ತು ವಿಶಾಲ್ ಸೀರ್ವಿ (3) ಅವರು 35 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಪ್ರಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆ ಸಾಧಿಸಿದರು.
 ಪುರುಷರ ವಿಭಾಗದಲ್ಲಿ 3ನೇ ಶ್ರೇಯಾಂಕದ ದಾವಣಗೆರೆಯ ಅಲೋಕ್ ಆರಾಧ್ಯ ಪ್ರಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡರೆ, ಇದೇ ವಿಭಾಗದಲ್ಲಿ ಎರಡನೇ ಶ್ರೇಯಾಂಕದ ಮೈಸೂರಿನ ಯೋಗಿನ್ ಎಸ್. ಪ್ರಕಾಶ್ ಅವರು ಬಳ್ಳಾರಿಯ ಶ್ರೇಯಾಂಕ ರಹಿತ ಆಟಗಾರ ಸುರೇಶ್ ವಿರುದ್ಧ ಸೋಲುಂಡರು.
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net