

ದಾವಣಗೆರೆ : ಚನ್ನಗಿರಿ ತಾಲೂಕು ನಲ್ಕುದುರೆ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವರ ಮಹಾ ಕೆಂಡಾರ್ಚನೆ ಮತ್ತು ಹೂವಿನ ಪಲ್ಲಕ್ಕಿ ಉತ್ಸವ ಶನಿವಾರ ನಡೆಯಲಿದೆ. ಶ್ರೀ ವೀರಭದ್ರೇಶ್ವರ, ಶ್ರೀ ಆಂಜನೇಯ ಸ್ವಾಮಿ ಹಾಗೂ ದುರ್ಗಾಂಬಿಕಾ ದೇವರುಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ವೀರಗಾಸೆ ಹಾಗೂ ವಿವಿಧ ವಾದ್ಯಗಳು ಮೇಳೈಸಲಿವೆ. ಭಕ್ತರು ಪಾಲ್ಗೊಳ್ಳುವಂತೆ ಕೋರಲಾಗಿದೆ.