

ದಾವಣಗೆರೆ : ಇತಿಹಾಸ ಪ್ರಸಿದ್ಧ ಹರಪನಹಳ್ಳಿ ತಾಲೂಕು ಶ್ರೀಕ್ಷೇತ್ರ ಚಿಗಟೇರಿ ಗ್ರಾಮದಲ್ಲಿ ಶನಿವಾರ ಶ್ರೀ ನಾರದಮುನಿ ಸಮುದಾಯ ಭವನವನ್ನು ಶ್ರೀ ನಾರದಮುನಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಅಣಬೇರು ರಾಜಣ್ಣ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಸಮುದಾಯ ಭವನವನ್ನು ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಚಿಗಟೇರಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇದು ಉಪಯೋಗವಾಗಲಿದೆ ಎಂದು ತಿಳಿಸಿದರು. ಈ ಭವನದಲ್ಲಿ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದ್ದು ಮದುವೆ, ತೊಟ್ಟಿಲು ಕಾರ್ಯ, ನಿಶ್ಚಿತಾರ್ಥ, ಕೈಲಾಸ ಸಮಾರಾಧನೆ ಮುಂತಾದ ಕಾರ್ಯಕ್ರಮಗಳನ್ನು ನೆರವೇರಿಸಲು ಸೂಕ್ತವಾಗಿದೆ. ರಿಯಾಯತಿ ದರದಲ್ಲಿ ಸೇವೆ ಒದಗಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಸಮುದಾಯ ಭವನದ ನಿರ್ಮಾಣ ಕಾರ್ಯದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕಾರ ನೀಡಿದವರಿಗೆ ಧನ್ಯವಾದ ತಿಳಿಸಿದರು. ವಡ್ನಾಳ್ ಶಡಕಪ್ಪ, ಶಾಮನೂರು ಬಸಣ್ಣ, ಇಂಜಿನಿಯರ್ ಜಿ.ಬಿ. ಸುರೇಶ್, ಹೊಳಲ್ಕೆರೆ ವೇದಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ದ್ಯಾಮನಗೌಡ್ರು, ರಾಜಣ್ಣಗೌಡ, ಜಯಣ್ಣಗೌಡ ಇತರರು ಇದ್ದರು. ಕಕ್ಕರಗೊಳ್ಳದ ಕೆ.ಬಿ. ಪರಮೇಶ್ವರಪ್ಪ ಕಾರ್ಯಕ್ರಮ ನಿರೂಪಿಸಿದರು. ಕಲ್ಪನಹಳ್ಳಿ ಬಸಲಿಂಗಪ್ಪ ಸ್ವಾಗತಿಸಿದರು. ಪಲ್ಲಾಗಟ್ಟಿ ನಾಗರಾಜ್ ವಂದಿಸಿದರು. ...