ಶಿವನಾರದಮುನಿ ಸ್ವಾಮಿಯ ಕಡೇ ಶ್ರಾವಣ ಶನಿವಾರ 16 ರಂದು

CbbLuX6WwAIDLjH.jpg
Published on

ದಾವಣಗೆರೆ : ಇತಿಹಾಸ ಪ್ರಸಿದ್ಧ ಹರಪನಹಳ್ಳಿ ತಾಲೂಕು ಶ್ರೀಕ್ಷೇತ್ರ ಚಿಗಟೇರಿ ಗ್ರಾಮದಲ್ಲಿ ಆ. 16 ರಂದು ಸ್ವಾಮಿಯ ಕಡೇ ಶ್ರಾವಣ ಶನಿವಾರ ಹಾಗೂ ನಾರದಮುನಿ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಅಂದು ಬೆಳಗ್ಗೆ 5 ರಿಂದ 6 ರ ವರೆಗೆ ರುದ್ರಾಭಿಷೇಕ, ವಿಶೇಷ ಹೂವಿನ ಅಲಂಕಾರದೊಂದಿಗೆ ಮಹಾ ಮಂಗಳಾರತಿ ವಿಶೇಷ ಪೂಜೆ ನೆರವೇರುವುದು.  ಅಂದು ಬೆಳಗ್ಗೆ 11 ಗಂಟೆಗೆ ಶ್ರೀ ನಾರದಮುನಿ ಟ್ರಸ್ಟ್ ಮತ್ತು ವಿಧಾನ ಪರಿಷತ್ ಸದಸ್ಯರ ಅನುದಾನದಿಂದ ನಿರ್ಮಾಣಗೊಂಡಿರುವ ನಾರದಮುನಿ ಸಮುದಾಯ ಭವನ ಉದ್ಘಾಟನೆಯನ್ನು ಟ್ರಸ್ಟ್‌ನ ಅಧ್ಯಕ್ಷ ಅಣಬೇರು ರಾಜಣ್ಣ ನೆರವೇರಿಸುವರು.  ಸುಮಾರು 25 ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ನಾರದಮುನಿ ಸೇವಾ ಟ್ರಸ್ಟ್‌ನವರು ತಿಳಿಸಿದ್ದಾರೆ.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net