ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಮಹೋತ್ಸವ

dvg-veerabhadreshwara.jpg
Published on

ದಾವಣಗೆರೆ : ನಗರದ ಹಳೇಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಅಂಗವಾಗಿ ಗುಗ್ಗಳ ಮತ್ತು ಕೆಂಡ ತುಳಿಯುವ ಕಾರ್ಯಕ್ರಮ ಶುಕ್ರವಾರ ಅಪಾರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.  ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣವನ್ನು ತೆಂಗಿನ ಗರಿ, ಮಾವಿನ ಚಪ್ಪರ, ಬಾಳೆಕಂದು, ಬಗೆ ಬಗೆಯ ಹೂವುಗಳು ಮತ್ತು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ದೇಗುಲ ಮುಂಭಾಗದಲ್ಲಿ ಅಗ್ನಿಕುಂಡವನ್ನು ನಿರ್ಮಿಸಲಾಗಿತ್ತು.  ದೇಗುಲ ಆವರಣದಲ್ಲಿ ವಾದ್ಯಗಳ ಸದ್ದು ಆವರಿಸಿತ್ತು. ಭಕ್ತರು ಬರಿಗಾಲಿನಲ್ಲಿ ದೈವ ಸನ್ನಿಧಿಗೆ ಬಂದಿದ್ದರು. ಹಣ್ಣು, ತೆಂಗಿನಕಾಯಿ, ಹೂವು, ಎಡೆಯನ್ನು ತಂದಿದ್ದರು. ಕೆಲವರು ವೀರಭದ್ರ ದೇವರ ಹಲಗೆಯೊಂದಿಗೆ ಬಂದಿದ್ದರು. ಮಹಿಳೆಯರು, ಮಕ್ಕಳು ಸೇರಿ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.  ‘ವೀರೇಶ ದೊರೆಯೇ ನಿನಗಾರು ಸರಿಯೇ, ಸರಿ ಸರಿ ಎಂದವರ ಅಜ್ಞಾನ ಹರಿಯೇ.... ಬಹು ಪರಾಕ್’ ಎಂಬ ಘೋಷಣೆಗಳು ಕೇಳಿಬಂದವು. ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯೊಂದಿಗೆ ಶಿವ, ಪಾರ್ವತಿ, ಗಣೇಶ, ದಕ್ಷಬ್ರಹ್ಮನ ಮೂರ್ತಿಗಳನ್ನು ಇಟ್ಟು ವಿಶೇಷ ಅಲಂಕಾರದೊಂದಿಗೆ ಪೂಜೆ ಮಾಡಲಾಯಿತು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net