

ದಾವಣಗೆರೆ : ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದ ಶ್ರೀ ಶಿವನಾರದಮುನಿ ರಥೋತ್ಸವವು ಏ. 18ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುವ ಸಂಬಂಧ ಪೂರ್ವಭಾವಿ ಸಭೆಯನ್ನು ಚಿಗಟೇರಿ ದೇವಸ್ಥಾನದ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಏ. 18ರ ಶುಕ್ರವಾರ ಸಂಜೆ 5 ರಿಂದ 6 ರವರೆಗೆ ಸಲ್ಲುವ ಮೂಲಾ ನಕ್ಷತ್ರದಲ್ಲಿ ರಥೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಹೋಟೆಲ್ ಉದ್ಯಮಿ, ಶ್ರೀ ನಾರದಮುನಿ ಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಅಣಬೇರು ರಾಜಣ್ಣ ತಿಳಿಸಿದರು. 19ರಂದು ಸಂಜೆ 5.30ಕ್ಕೆ ಓಕಳಿ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು. ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಸವಿತಾ, ಗ್ರಾ.ಪಂ. ಅಧ್ಯಕ್ಷ ನಾಗರಾಜ್ ಚಿಗಟೇರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಚಿಗಟೇರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನಾಗರತ್ನಮ್ಮ, ತಾಲೂಕು ಆರೋಗ್ಯಾಧಿಕಾರಿ, ದೇವಸ್ಥಾನ ಸಮಿತಿ ಸದಸ್ಯ ವಡ್ಡಿನಹಳ್ಳಿ ಷಡಕಣ್ಣ, ಶಾಮನೂರು ಬಸಣ್ಣ, ಕಲಪನಹಳ್ಳಿ ಬಸವಲಿಂಗಪ್ಪ, ಹೊಳಲ್ಕೆರೆ ವೇದಮೂರ್ತಿ, ಹುಣಸಿಹಳ್ಳಿ ಜಾತಪ್ಪ, ಇಂಜಿನಿಯರ್ ಸುರೇಶ್, ಪಲ್ಲಾಗಟ್ಟೆ ನಾಗರಾಜ್, ಗಾಂಧಿನಗರ ಜಯಣ್ಣ ಮತ್ತು ಸ್ಥಳೀಯ ಮುಖಂಡರಾದ ದ್ಯಾಮನಗೌಡ್ರು, ರಾಜಣ್ಣ, ಹಾಲಪ್ಪ, ಬಸವನಗೌಡ್ರು, ಜಯ್ಯನಗೌಡ್ರು ಮತ್ತು ದೇವಸ್ಥಾನದ ಅರ್ಚಕರು ಸೇರಿ ಅನೇಕ ಭಕ್ತರು, ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ದೇವಸ್ಥಾನದ ಎಲ್ಲ ಭಕ್ತರು ರಥೋತ್ಸವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಟ್ರಸ್ಟ್‌ನ ಅಧ್ಯಕ್ಷ ಅಣಬೇರು ರಾಜಣ್ಣ ತಿಳಿಸಿದ್ದಾರೆ.