ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಸಚಿವರ ಭೇಟಿ

dvg-temple.jpg
Published on

ದಾವಣಗೆರೆ :  ಇಲ್ಲಿನ ಜಾಲಿ ನಗರದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಶುಕ್ರವಾರ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.  ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಕಮಿಟಿಯಿಂದ 18ನೇ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆ ಹಮ್ಮಿಕೊಂಡಿದ್ದ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದರು.  ದೇವಸ್ಥಾನದ ಅಧ್ಯಕ್ಷ ಜಿ. ಶಿವಕುಮಾರ್, ಉಪಾಧ್ಯಕ್ಷರಾದ ಪ್ರಭುಕುಮಾರ್ ಧನ್ನೂರು, ಕರಿಬಸಪ್ಪ ಕಸವಾಳ, ಖಜಾಂಚಿ ಬಿ. ಜಯರಾಜ್, ಕಾರ್ಯದರ್ಶಿ ಜಿ.ಎನ್. ಬಸವರಾಜ್, ಸಹ ಕಾರ್ಯದರ್ಶಿ ಆರ್. ವಾಸುದೇವ. ಸದಸ್ಯರಾದ ಕೃಷ್ಣಾರೆಡ್ಡಿ, ರಘು ಬಡಿಗಿ, ಚೇತನಾ ಶಿವಕುಮಾರ್, ಯಂಕೋಜಿರಾವ್, ಮಲ್ಲಿಕಾರ್ಜುನ ರಾಮನಗೌಡ, ಸೋಮಣ್ಣ, ಪಿ.ಡಿ. ಅರುಣ್ ಕುಮಾರ್ ಹಾಗೂ ದೇವಸ್ಥಾನದ ಕಮಿಟಿಯವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net