ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ

dvg-kanyaka-parameshwari-04.jpg
Published on

ದಾವಣಗೆರೆ: ನಗರದ ಎಸ್.ಕೆ.ಪಿ. ರಸ್ತೆಯಲ್ಲಿರುವ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಶನಿವಾರ 67ನೇ ವರ್ಷದ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಸಂಘದ ಅಧ್ಯಕ್ಷ. ಆರ್.ಎಲ್. ಪ್ರಭಾಕರ್ ತಿಳಿಸಿದ್ದಾರೆ.
 ಲೋಕ ಕಲ್ಯಾಣಾರ್ಥವಾಗಿ ಹಾಗೂ ಎಲ್ಲರ ಶ್ರೇಯೋಭಿವೃದ್ಧಿಗಾಗಿ ನಡೆಯಲಿರುವ ಈ ಪೂಜಾ ಕಾರ್ಯಕ್ರಮದಲ್ಲಿ ಬೆಳಗ್ಗೆ 7 ರಿಂದ ಗಣಪತಿ ಸ್ಮರಣಪೂರ್ವಕ ಗಂಗಾ ತರುವುದು, ಜನಾರ್ದನ ಸ್ವಾಮಿಗೆ ವಿಶೇಷ ಪಂಚಾಮೃತ ಮತ್ತು ಸುಗಂಧ ದ್ರವ್ಯಗಳಿಂದ ಅಭಿಷೇಕ, ನಂತರ ವಿಶೇಷ ಅಲಂಕಾರ, ಫಲ ಸಮರ್ಪಣೆ ಮಾಡಲಾಗುವುದು.
 ಬೆಳಗ್ಗೆ 8.45ರಿಂದ ಮಹಾಗಣಪತಿ ಪೂಜೆ, ನವಗ್ರಹ ಪೂಜೆ, ಸತ್ಯನಾರಾಯಣ ಸ್ವಾಮಿ ವ್ರತ ಪೂಜೆ, ಕಥಾ ಶ್ರವಣ, ಮಹಾ ಮಂಗಳಾರತಿ, ಸಂಜೆ 7ರಿಂದ ಸತ್ಯನಾರಾಯಣ ಸ್ವಾಮಿಗೆ ರಥಾರೋಹಣ, ಉಯ್ಯಲೆ ಸೇವೆ, ಮಂತ್ರಪುಷ್ಪ, ಅಷ್ಟಾವಧಾನ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
 ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net