ಶಿಕ್ಷಕರು ಬದುಕು ರೂಪಿಸುವ ಶಿಲ್ಪಿಗಳು

DVG-ANMOL-23.jpg
Published on

ದಾವಣಗೆರೆ :  ಶಿಕ್ಷಕರು ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಶಿಲ್ಪಿಗಳು ಎಂದು ಗಣಕಯಂತ್ರ ಶಿಕ್ಷಕ ಎಂ.ಪಿ.ಶಿವಕುಮಾರ್ ಹೇಳಿದರು.  ಸಮೀಪದ ಶಿರಮಗೊಂಡನಹಳ್ಳಿಯ ಅನ್‌ಮೋಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಜೀವನದಲ್ಲಿ ತಂದೆ, ತಾಯಿಗಳಂತೆ ಶಿಕ್ಷಕರ ಪಾತ್ರವೂ ಬಹಳ ಮಹತ್ವವಾಗಿದೆ. ಶಿಕ್ಷಕರು ಅಕ್ಷರದ ಜತೆಗೆ ಬದುಕಿನ ಕೌಶಲ ಕಲಿಸಲಿದ್ದಾರೆ ಎಂದು ತಿಳಿಸಿದರು.  ಸಂಸ್ಥೆಯ ಅಧ್ಯಕ್ಷ ಸಿ.ಜಿ.ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಅನ್‌ಮೋಲ್ ಶಾಲೆ ಹಾಗೂ ಕಾಲೇಜು ಪ್ರಾಚಾರ್ಯರಾದ ಯು.ಕೊಟ್ರೇಶ್, ಸುಬ್ರಮಣಿ, ಶೈಕ್ಷಣಿಕ ಸಲಹೆಗಾರ ಎಸ್.ಚಿದಾನಂದ್ ಇದ್ದರು.  ರೋಟರಿ, ಇನ್ನರ್‌ವ್ಹೀಲ್ ಸಂಸ್ಥೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಂ.ಪಿ.ಶಿವಕುಮಾರ್ ಹಾಗೂ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಆರ್.ಅಣ್ಣಪ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net