

ದಾವಣಗೆರೆ: ರೋಟರಿ ಕ್ಲಬ್ ದಾವಣಗೆರೆಯಿಂದ ನಗರದ ಬಾಡ ಕ್ರಾಸ್‌ನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಅಂಧ ಮಕ್ಕಳ ಶಾಲೆಯ ಶಿಕ್ಷಕರಿಗೆ ಸನ್ಮಾನಿಸುವ ಮೂಲಕ ವಿಶಿಷ್ಟವಾಗಿ ಶಿಕ್ಷಕರ ದಿನ ಆಚರಿಸಲಾಯಿತು. ಸಂಗೀತ ಶಿಕ್ಷಕ ಆನಂದ್ ಪಾಟೀಲ್, ತಬಲಾ ಶಿಕ್ಷಕ ಸುರೇಶ್ ಕೊಪ್ಪಳ, ಬ್ರೈಲ್ ಲಿಪಿ ಹೇಳಿಕೊಡುತ್ತಿರುವ ಸತೀಶ್, ಡಾ. ಜೆ.ಎನ್. ಕರಿಬಸಪ್ಪ, ಅಮರಯ್ಯ ಸ್ವಾಮಿ, ಚನ್ನವೀರಯ್ಯ ಸ್ವಾಮಿ ಹಾಗೂ ಅಕ್ಕಮ್ಮ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಆನಂದ್ ಪಾಟೀಲ್ ಮಾತನಾಡಿ, ಶಿಕ್ಷಕರ ದಿನಾಚರಣೆಗೆ ತಮ್ಮ ಶಾಲೆಯ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವುದು ಒಂದು ಅಪರೂಪದ ಮತ್ತು ಹೆಮ್ಮೆಯ ವಿಷಯ. ಇದು ನಮ್ಮ ಕಾಯಕಕ್ಕೆ ಹುಮ್ಮಸ್ಸು ನೀಡಿದಂತಾಗಿದೆ ಎಂದು ಹೇಳಿದರು. ರೋಟರಿ ಕ್ಲಬ್ ದಾವಣಗೆರೆ ಅಧ್ಯಕ್ಷೆ ಸುನೀತಾ ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಆರ್.ಟಿ. ಮೃತ್ಯುಂಜಯ, ಸದಸ್ಯರಾದ ಎಸ್.ಕೆ. ವೀರಣ್ಣ, ಬಸವರಾಜ ಒಡೆಯರ್, ರಮೇಶ್ ಅಂಬರ್‌ಕರ್, ಜಿ.ಎಂ. ಲೋಹಿತಾಶ್ವ, ಆರ್.ಟಿ. ನಟರಾಜ್, ಆರ್.ಎಸ್. ರಾಜೇಂದ್ರ ಕುಮಾರ್, ವಿಕಾಸಕುಮಾರ್ ಸಾಂಘವಿ, ಇನ್ನರ್ ವೀಲ್ ಕ್ಲಬ್ ಸದಸ್ಯೆಯರಾದ ಸಾವಿತ್ರಮ್ಮ ವೀರಣ್ಣ, ಚೂಡಾಮಣಿ ಇದ್ದರು. ವಿದ್ಯಾರ್ಥಿಗಳು ಬಸವಣ್ಣನವರ ವಚನಗಳನ್ನು ಹಾಡುಮೂಲಕ ಕಾರ್ಯಕ್ರಮಕ್ಕೆ ಮುದನೀಡಿದರು.