ಸ್ವಾಮೀಜಿ ಅವರನ್ನು ರಾಜಕೀಯವಾಗಿ ಎಳೆದು ತರುವುದು ಬೇಡ

dvg-H.S.-Shiva-shankar.jpg
Published on

ದಾವಣಗೆರೆ : ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಮತ್ತು ವಿಜಯಾನಂದ ಕಾಶಪ್ಪನವರ ಮಧ್ಯೆ ಭಿನ್ನಾಭಿಪ್ರಾಯ ಇರಬಹುದು. ಆದರೆ ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ರಾಜಕೀಯವಾಗಿ ಎಳೆದು ತರುವುದು ಸರಿಯಲ್ಲ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು.  ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾಯಕರ ವ್ಯತ್ಯಾಸಗಳಿಂದ ಸಮಾಜಕ್ಕೆ ಪೆಟ್ಟು ಬೀಳುತ್ತಿದೆ. ಟ್ರಸ್ಟ್ ದೊಡ್ಡದಲ್ಲ ಸಮಾಜ ದೊಡ್ಡದು ಎಂದು ತಿಳಿಸಿದರು.  ಸಮಾಜಕ್ಕೆ 2ಎ ಮೀಸಲಾತಿಗಾಗಿ ಸ್ವಾಮೀಜಿ ಕೂಡಲ ಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿ ಸಮಾಜವನ್ನು ಸಂಘಟಿಸಿದ್ದಾರೆ. ಏಳೆಂಟು ಹಂತದ ಹೋರಾಟ ಮಾಡಿದ್ದಾರೆ. 2ಡಿ ಮೀಸಲಾತಿ ಕೊಟ್ಟಾಗ ನಮ್ಮ ನಾಯಕರಲ್ಲಿ ಭಿನ್ನಾಭಿಪ್ರಾಯ ಬಂದಿದೆ ಎಂದರು.  ಸ್ವಾಮೀಜಿ ಯಾವುದೇ ಪಕ್ಷ, ನಾಯಕರ ಪರವಾಗಿಲ್ಲ. ಸಮಾಜಕ್ಕೆ ಸಂಕಷ್ಟ ಬಂದಾಗ ಎದೆ ಕೊಟ್ಟು ನಿಂತಿದ್ದಾರೆ. ಅವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಹೇಳಿದರು.  ಕಾಶಪ್ಪನವರ ಹಾಗೂ ಸ್ವಾಮೀಜಿ ಇಬ್ಬರನ್ನೂ ಭೇಟಿ ಮಾಡಿ ಬಗೆಹರಿಸುತ್ತೇವೆ. ಪರ್ಯಾಯ ಸ್ವಾಮೀಜಿ ಪ್ರಶ್ನೆ ಇಲ್ಲ. ಸ್ವಾಮೀಜಿ ಬದಲಾವಣೆ ಹುಡುಗಾಟಿಕೆ ಅಲ್ಲ. ಸಮಾಜದ ಹಿರಿಯರು ಕುಳಿತು ಪರಿಹಾರ ಮಾಡೋಣ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net