ದೈವಜ್ಞ ಸಮಾಜದಲ್ಲಿ ಬೇಕು ಒಗ್ಗಟ್ಟು

dvg-daivagna-samaja.jpg
Published on

ದಾವಣಗೆರೆ : ದೈವಜ್ಞ ಸಮಾಜವು ಪ್ರತಿಷ್ಠಿತ ಹಾಗೂ ಸೌಮ್ಯ ಸಮಾಜವಾಗಿದ್ದು ಒಗ್ಗಟ್ಟು ಅಗತ್ಯವಾಗಿದೆ ಎಂದು ಅಖಿಲ ಕರ್ನಾಟಕ ದೈವಜ್ಞ ಸಮಾಜ ಸಂಘದ ಅಧ್ಯಕ್ಷ ರವಿ ಶ್ರೀಕಾಂತ್ ಗಾವ್ಕರ್ ಹೇಳಿದರು.  ನಗರದ ಪಿಬಿ ರಸ್ತೆಯ ಶ್ರೀ ರೇಣುಕಾ ಬಡಾವಣೆಯಲ್ಲಿ ಬುಧವಾರ, ನವೀಕೃತಗೊಂಡ ದೈವಜ್ಞ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.  ಸಮಾಜದ ಕೆಲಸ ಮಾಡುವಾಗ ಪ್ರತಿಯೊಬ್ಬರಿಗೂ ಕಷ್ಟವಾಗುತ್ತದೆ. ಯುವ ಸಮುದಾಯ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚು ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿ ಕುಟುಂಬದಲ್ಲಿ ಪಾಲಕರು ಯುವ ಸಮುದಾಯಕ್ಕೆ ಮಾರ್ಗದರ್ಶನ ನೀಡಬೇಕು ಎಂದರು.  ದಾವಣಗೆರೆ ದೈವಜ್ಞ ಸಮಾಜ ಸಂಘದ ಅಧ್ಯಕ್ಷ ಪ್ರಶಾಂತ್ ವಿಶ್ವನಾಥ್ ವರ್ಣೇಕರ್ ಮಾತನಾಡಿ, ಮುಂಬರುವ ದಿನಗಳಲ್ಲಿ ದೈವಜ್ಞ ಸಮಾಜದ ಸಂಘದ ವತಿಯಿಂದ ಗುರುಭವನ, ದೇವಾಲಯ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.  ದಾವಣಗೆರೆ ದೈವಜ್ಞ ಸಮಾಜದ ಮಾಜಿ ಅಧ್ಯಕ್ಷ ಸತ್ಯನಾರಾಯಣ ರಾಯಕರ್ ಮಾತನಾಡಿ, ನವೀಕೃತಗೊಂಡ ಕಲ್ಯಾಣ ಮಂದಿರದಲ್ಲಿ ಶ್ರೀಗಳ ಚಾತುರ್ಮಾಸ ಕಾರ್ಯಕ್ರಮ ಎರಡು ತಿಂಗಳ ಕಾಲ ನಡೆಯಲಿದೆ. ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.  ಉದ್ಯಮಿ ರಾಜಕುಮಾರ್ ಶಾಂತರಾಮ್ ರೇವಣಕರ್ ಮಾತನಾಡಿ, ಈ ಕಲ್ಯಾಣ ಮಂದಿರ ಸಮಾಜದ ಬಡವರಿಗೆ ಅನುಕೂಲವಾಗಲಿ ಎಂದರು.  ದೈವಜ್ಞ ಸಮಾಜದ ನಿರ್ದೇಶಕ ಶಂಕರ್ ಎನ್ ವಿಠಲ್ಕರ್, ದೈವಜ್ಞ ಸೊಸೈಟಿ ಮಾಜಿ ಅಧ್ಯಕ್ಷ ಭೈರವೇಶ್ವರ ಎಸ್. ಕುರುಡೇಕರ್, ಸುಧೀರ್ ಗಂಗಾಧರ್ ವರ್ಣೇಕರ್ ಮಾತನಾಡಿದರು. ಸತೀಶ್ ಎಸ್. ಸಾನು ಪ್ರಾಸ್ತಾವಿಕ ಮಾತನಾಡಿದರು. ಜಯರಾಮ್ ಡಿ ಅಣವೇಕರ್, ಇ. ನಾಗರಾಜ್ ಇದ್ದರು.  ನಂದಾ ಮಂಜುನಾಥ್ ಸಂಗಡಿಗರು ಪ್ರಾರ್ಥಿಸಿದರು. ವಾಸುದೇವ್ ರಾಯ್ಕರ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯದ ಹಾಗೂ ಹೊರ ರಾಜ್ಯದ ದೈವಜ್ಞ ಸಮಾಜದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ಕಲ್ಯಾಣ ಮಂದಿರ ನಿರ್ಮಾಣದ ದಾನಿಗಳಿಗೆ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳನ್ನು ಬೈಕ್ ರ‌್ಯಾಲಿ ಹಾಗೂ ಪೂರ್ಣ ಕುಂಭದೊಂದಿಗೆ ಕಲ್ಯಾಣ ಮಂಟಪಕ್ಕೆ ಬರಮಾಡಿಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net