

ದಾವಣಗೆರೆ : ಅಖಿಲ ಭಾರತ ಮಾಧ್ವ ಮಹಾಮಂಡಲ ದಾವಣಗೆರೆ ಶಾಖೆ, ಶ್ರೀ ಪೇಜಾವರ ಅಧೋಕ್ಷಜ ಮಠದ ಸಂಯುಕ್ತ ಆಶ್ರಯದಲ್ಲಿ, ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಪಂಚಮ ಆರಾಧನಾ ಮಹೋತ್ಸವವನ್ನು ನಗರದ ಪಿ.ಜೆ. ಬಡಾವಣೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಮಹೋತ್ಸವದ ಅಂಗವಾಗಿ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸ ಡಾ. ಗುರುರಾಜ ಗುಡಿ ಅವರಿಂದ ಭಾಗವತ ಪ್ರವಚನ ಸೋಮವಾರ ಆರಂಭವಾಗಿದ್ದು, ಜ. 5 ರ ವರೆಗೆ ಪ್ರತಿ ದಿನ ಸಂಜೆ 6.30 ರಿಂದ ರಾತ್ರಿ 8 ಗಂಟೆಯ ವರೆಗೆ ನಡೆಯಲಿದೆ. ಮಂಗಳವಾರ ಋಗ್ವೇದ ಸ್ವಾಹಾಕಾರ ಹೋಮ, ಪುಣ್ಯಾಹವಾಚನ, ನಾಂದಿ, ಋತ್ವಿಗ್ವರುಣ, ಕೌತುಕ ಬಂಧನ, ಅಂಕುರಾರ್ಪಣ, ಅರಣಿಮಥನ ಕಾರ್ಯಕ್ರಮ ಆಯೋಜಿಸಲಾಗಿದೆ. ಜ. 1 ರಂದು ಋಗ್ವೇದ ಸ್ವಾಹಾಕಾರ ಹೋಮ ಮುಂದುವರಿಯಲಿದೆ. 2 ರಂದು ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿ, ಅವಭೃತ ಯಾಗ ಸಮಾಪ್ತಿ, ಮಧ್ಯಾಹ್ನ 12 ಗಂಟೆಗೆ ಸಭಾ ಕಾರ್ಯಕ್ರಮ, 1 ಗಂಟೆಗೆ ತೀರ್ಥಪ್ರಸಾದ ಇರಲಿದೆ. ಭಾಗವತ ಪ್ರವಚನ ಮಂಗಳ ಮಹೋತ್ಸವ ಜ. 5 ರಂದು ನಡೆಯಲಿದೆ. ಭಕ್ತರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ. ವಿಶ್ವಮಧ್ವ ಮಹಾಪರಿಷತ್, ಸರ್ವಜ್ಞಾಚಾರ್ಯ ಸೇವಾ ಸಂಘ, ಮಾಧ್ವ ಯುವಕ ಸಂಘ, ರಾಯರ ಮಠ (ಪಿ.ಜೆ. ಬಡಾವಣೆ ಮತ್ತು ಕೆ.ಬಿ. ಬಡಾವಣೆ), ನಂದಕಿಶೋರ ಭಜನಾ ಮಂಡಳಿ, ವಿಜಯ ವಿಠ್ಠಲ ಭಜನಾ ಮಂಡಳಿ, ಭಾರತಿ ಭಜನಾ ಮಂಡಳಿ, ಶ್ರೀಕೃಷ್ಣ ಮಿತ್ರವೃಂದ ಇನ್ನಿತರ ಸಂಘ ಸಂಸ್ಥೆಗಳು ಸಹಕಾರ ನೀಡಿವೆ.