ಮಾಧ್ವ ಯುವಕ ಸಂಘದ ವಾರ್ಷಿಕೋತ್ಸವಕ್ಕೆ ಚಾಲನೆ

dvg-pooje.jpg
Published on

ದಾವಣಗೆರೆ :  ಶ್ರೀ ಮಾಧ್ವ ಯುವಕ ಸಂಘದ 44ನೇ ವಾರ್ಷಿಕೋತ್ಸವ ಸಮಾರಂಭವನ್ನು ಸೋದೆ ಶ್ರೀ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ನಗರದ ಲಾಯರ್ ರಸ್ತೆಯ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ಸೋಮವಾರ ಉದ್ಘಾಟಿಸಿದರು.  ಭೂತರಾಜರು ಮತ್ತು ಹಯಗ್ರೀವ ದೇವರ ತೊಟ್ಟಿಲು ಪೂಜೆಯನ್ನು ನೆರವೇರಿಸಿದ ಗುರುಗಳು, ನಂತರ ಅನುಗ್ರಹ ಸಂದೇಶ ನೀಡಿದರು.  ವಾರ್ಷಿಕೋತ್ಸವ ಅಂಗವಾಗಿ ವೇದ ಪಂಡಿತ ನರಹರಿ ಆಚಾರ್ಯ ಮುತ್ತಗಿ ಅವರಿಂದ ‘ಸಮಾಜಕ್ಕೆ ರಾಮಾಯಣದ ಕೊಡುಗೆ’ ವಿಷಯದ ಕುರಿತು ಮೊದಲ ದಿನದ ಪ್ರವಚನ ನಡೆಯಿತು. ಸಂಘದ ಸದಸ್ಯರು, ಭಜನಾ ಮಂಡಳಿಗಳ ಸದಸ್ಯರು, ಸಮಾಜದವರು ಪಾಲ್ಗೊಂಡಿದ್ದರು.  ನಂತರ ದೈವಜ್ಞ ಬ್ರಾಹ್ಮಣರ ಶಿಷ್ಯ ವೃಂದದವರು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರನ್ನು ಸರ್ವಜ್ಞಾಚಾರ್ಯ ಸೇವಾ ಸಂಘದಿಂದ ಸ್ವಾಗತಿಸಿ, ಬೈಕ್ ರ‌್ಯಾಲಿಯ ಮೂಲಕ ನರಹರಿ ಶೇಟ್ ಸಭಾ ಭವನಕ್ಕೆ ಕರೆದುಕೊಂಡು ಹೋದರು.  ಶಿಷ್ಯ ವೃಂದದ ಅಧ್ಯಕ್ಷ ನಲ್ಲೂರು ಎಸ್. ರಾಜಕುಮಾರ್, ನಲ್ಲೂರು ರಾಘವೇಂದ್ರ, ರಾಮಚಂದ್ರ ರಾಯ್ಕರ್, ಅಣ್ಣಪ್ಪ, ರಮೇಶ, ದೈವಜ್ಞ ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net