

ನ್ಯಾಮತಿ : ತಾಲೂಕಿನ ಗೋವಿನಕೋವಿ ಗ್ರಾಮದ ಹಾಲಸ್ವಾಮಿ ಬೃಹನ್ಮಠದ ಲಿಂ. ಶ್ರೀ ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮೀಜಿ ಅವರ 31ನೇ ಹಾಗೂ ಸಣ್ಣಹಾಲಸ್ವಾಮೀಜಿ ಆವರ 13ನೇ ವರ್ಷದ ಪುಣ್ಯರಾಧನೆ ಶನಿವಾರ ನಡೆಯಿತು. ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರಿಂದ ಇಷ್ಟಲಿಂಗ ಮಹಾಪೂಜೆ, ಶ್ರೀ ಹಾಲಸ್ವಾಮಿ ಮಠದ ಕರ್ತೃಗದ್ದುಗೆಗಳಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಗಂಗಾಪೂಜೆ, ಗಣಪತಿ, ಗುರುಕಲಶ ಪೂಜೆ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳು ಮಂತ್ರಘೋಷಗಳೊಂದಿಗೆ ನಡೆದವು. ಹಾಲಸ್ವಾಮೀಜಿ ಮಠದ ನಿಯೋಜಿತ ಶಿವಯೋಗಿ ಮಹಾಲಿಂಗ ಹಾಲಸ್ವಾಮೀಜಿ ಪೂಜೆ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು. ಪೂಜೆ ಬಳಿಕ ಹಾಲಸ್ವಾಮೀಜಿ ಬೃಹನ್ಮಠದ ಲಿಂ. ಶ್ರೀ ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮೀಜಿ, ಸಣ್ಣಹಾಲಸ್ವಾಮೀಜಿಯವರ ಭಾವಚಿತ್ರಗಳನ್ನು ಅಲಂಕೃತ ಪಲ್ಲಕಿಯಲ್ಲಿಟ್ಟು ಗ್ರಾಮದ ರಾಜ ಬೀದಿಯಲ್ಲಿ ಸಕಲ ಜನಪದ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು.