ರಾಹುಲ್ ಗಾಂಧಿ ಹೇಳಿಕೆಗೆ ಪೇಜಾವರ ಶ್ರೀ ಅಸಮಾಧಾನ

Pejawar-seer09dec2021.jpg
Published on

ದಾವಣಗೆರೆ :  ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಿಂದುಗಳ ಕುರಿತು ಇತ್ತೀಚೆಗೆ ಸಂಸತ್‌ನಲ್ಲಿ ನೀಡಿದ ಹೇಳಿಕೆಯ ಬಗ್ಗೆ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿ ಮಾತನಾಡಬಾರದು ಎಂದು ಪ್ರತಿಕ್ರಿಯೆ ನೀಡಿದರು.  ರಾಹುಲ್ ಅವರದು ಪ್ರಚೋದನಕಾರಿ ಭಾಷಣ. ಇಂಥ ಮಾತುಗಳ ಮೂಲಕ ಸಮಾಜದ ಎರಡು ಪಂಗಡಗಳ ನಡುವೆ ದ್ವೇಷಕ್ಕೆ ಕಾರಣವಾಗಬಾರದು ಎಂದು, ಮಣಿಪುರದಲ್ಲಿ ನಡೆದ ಘಟನೆಯ ಉದಾಹರಣೆ ನೀಡಿದರು.  ಅಯೋಧ್ಯೆ ರಾಮ ಮಂದಿರ ಕಾಮಗಾರಿ ಇನ್ನೂ ಸಂಪೂರ್ಣ ಮುಗಿದಿಲ್ಲ. ಹಾಗಾಗಿ ಮಳೆ ಬಂದಾಗ ನೀರು ಕೆಳಗೆ ಬರುವುದು ಸಹಜ. ಕಳಪೆ ಕಾಮಗಾರಿ ಆಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  ಮುಖ್ಯಮಂತ್ರಿ ಬದಲಾವಣೆ ಕುರಿತು ಚಂದ್ರಶೇಖರ ಸ್ವಾಮೀಜಿ ಇತ್ತೀಚೆಗೆ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿ, ಸ್ವಾಮೀಜಿಗಳೂ ಚುನಾವಣೆಯಲ್ಲಿ ಮತ ಚಲಾವಣೆ ಮಾಡುತ್ತಾರೆ, ಅವರೂ ಪ್ರಜೆಗಳೇ ಆಗಿದ್ದಾರೆ. ಅವರು ರಾಜಕೀಯದ ಬಗ್ಗೆ ಮಾತನಾಡಬಾರದು ಎನ್ನುವುದು ಸರಿಯಲ್ಲ. ಮತ ಹಾಕಿದವರಾಗಿ ಹೇಳಿಕೆ ನೀಡುವುದು ತಪ್ಪೇನಿಲ್ಲ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net