ದಾವಣಗೆರೆ ವಿವಿ ಪ್ರೊಫೆಸರ್ ಅಮಾನತು

dvg-prof.-Gayatri-Devaraj.jpg
Published on

ದಾವಣಗೆರೆ : ನ್ಯಾಕ್ ಲಂಚ ಪ್ರಕರಣ ಹಿನ್ನೆಲೆಯಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ದಾವಣಗೆರೆ ವಿಶ್ವವಿದ್ಯಾಲಯದ ಪ್ರೊಫೆಸರ್ ಗಾಯತ್ರಿ ದೇವರಾಜ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.  ಗುರುವಾರ ನಡೆದ ದಾವಣಗೆರೆ ವಿವಿಯ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ಚರ್ಚಿಸಿ ಅಮಾನತು ಆದೇಶ ಹೊರಡಿಸಲಾಯಿತು.  ಈ ವಿಷಯವನ್ನು ವಿವಿ ಕುಲಪತಿ ಬಿ.ಡಿ. ಕುಂಬಾರ್ ಖಚಿತಪಡಿಸಿದ್ದಾರೆ. ಕೆಸಿಎಸ್‌ಆರ್ ನಿಯಮಗಳ ಪ್ರಕಾರ ಪ್ರೊಫೆಸರ್ ಗಾಯತ್ರಿ ದೇವರಾಜ್ ಅವರನ್ನು ಅಮಾನತುಗೊಳಿಸಲಾಗಿದೆ. ಆದೇಶದ ಪ್ರತಿಯನ್ನು ರಾಜ್ಯಪಾಲರಿಗೆ ಹಾಗೂ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿ ಅವರಿಗೆ ಕಳಿಸಿಕೊಡಲಾಗುವುದು ಎಂದು ತಿಳಿಸಿದರು.  ವಿಶ್ವವಿದ್ಯಾಲಯವೊಂದಕ್ಕೆ ನ್ಯಾಷನಲ್ ಅಸೆಸ್‌ಮೆಂಟ್ ಆ್ಯಂಡ್ ಅಕ್ರೆಡಿಟೇಶನ್ ಕೌನ್ಸಿಲ್ (ನ್ಯಾಕ್) ರೇಟಿಂಗ್ ನೀಡಲು ಲಂಚ ಪಡೆದ ಪ್ರಕರಣದಲ್ಲಿ ಗಾಯತ್ರಿ ದೇವರಾಜ್ ವಿರುದ್ಧವೂ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net