ರೈಲಿಗೆ ತಲೆ ಕೊಟ್ಟು ತಾಯಿ-ಮಗಳು ಆತ್ಮಹತ್ಯೆ

Crime_20250710233558723.jpg
Published on

ದಾವಣಗೆರೆ  : ಸಾಲ ಬಾಧೆ ತಾಳಲಾರದೇ ತಾಯಿ ಮತ್ತು ಮಗಳು ಹರಿಹರದ ತುಂಗಭದ್ರಾ ನದಿಯ ಸಮೀಪದಲ್ಲಿ ಗುರುವಾರ ಬೆಳಗಿನ ಜಾವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಹರಿಹರ ತಾಲೂಕು ಗಂಗನರಸಿ ಗ್ರಾಮದ ಸುವರ್ಣಮ್ಮ (65) ಮತ್ತು ಪುತ್ರಿ ಗೌರಮ್ಮ (32) ಮೃತಪಟ್ಟವರು. ಇಬ್ಬರ ರುಂಡ ಮತ್ತು ದೇಹ ಪ್ರತ್ಯೇಕಗೊಂಡಿದ್ದವು. ಇಲಾಖೆಯ ಸಿಬ್ಬಂದಿ (ಪಾಯಿಂಟ್ಸ್ ಮೆನ್) ಇದನ್ನು ಗಮನಿಸಿದ್ದಾರೆ. ಸ್ಥಳದಲ್ಲಿ ಚಿನ್ನಾಭರಣ ಅಂಗಡಿಯ ಪರ್ಸ್ ಮತ್ತು ಬೀಗದ ಕೈ ಪತ್ತೆಯಾಗಿತ್ತು.  ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೃಷ್ಣಾ ನಾಯ್ಕ ಎ. ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.  ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net